ಶಿವಮೊಗ್ಗ: ಸಹಕಾರಿ ಸಚಿವ ಕೆ.ಎನ್.ರಾಜಣ್ಣ, ಸದ್ಯ ಹಾಸನ ಜಿಲ್ಲೆಯ ಉಸ್ತುವಾರಿ ಸಚಿವ ಕೂಡ ಆಗಿದ್ದಾರೆ. ಈ ಮೊದಲೆಲ್ಲಾ ಹಾಸನ ಜಿಲ್ಲೆಯಲ್ಲಿಯೇ ಹೆಚ್ಚಾಗಿ ಇರ್ತಾ ಇದ್ರು. ಆದರೆ ಈಗ ಹಾಸನ ಜಿಲ್ಲೆಯತ್ತ ಮುಖ ಕೂಡ ಮಾಡಿಲ್ಲ. ಇದು ಹಾಸನ ಜನತೆಗೂ ಬೇಸರ ತರಿಸಿದೆ. ಒಬ್ಬರಲ್ಲ ಇಬ್ಬರಲ್ಲ ಪ್ರತಿ ದಿನ ಹಾರ್ಟ್ ಅಟ್ಯಾಕ್ ನಿಂದ ಸಾವಾದರೂ ಉಸ್ತುವಾರಿ ಸಚಿವರು ಬರ್ತಿಲ್ಲ ಅನ್ನೋದು. ಈ ಸಂಬಂಧ ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಆಕ್ರೋಶ ಹೊರ ಹಾಕಿದ್ದಾರೆ.
ಹಾಸನದಲ್ಲಿ ಸರಣಿ ಸಾವಾಗಿದೆ. ಆದರೂ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಪತ್ತೆ ಇಲ್ಲ. ಇದರಿಂದಾನೇ ಅರ್ಥವಾಗ್ತಾ ಇದೆ ಸರ್ಕಾರದಲ್ಲಿ ಎಷ್ಟು ನಿರ್ಲಕ್ಷ್ಯವಿದೆ ಎಂಬುದು ಎಂದಿದ್ದಾರೆ. ಇದೇ ವೇಳೆ ಸಿಎಂ ಕಾರ್ಯದರ್ಶಿ ಬಸವರಾಜ್ ರಾಯರೆಡ್ಡಿ ಅವರ ಹೇಳಿಕೆಯ ಬಗ್ಗೆಯೂ ಮಾತನಾಡಿದ್ದಾರೆ.
ಸಿದ್ದರಾಮಯ್ಯ ಅವರು ನೇರವಾಗಿ ಹೇಳದೆ ರಾಯರೆಡ್ಡಿ ಅವರಿಂದ ಹೇಳಿಸುತ್ತಿದ್ದಾರೆ. ಅವರಿಗೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಸಾಧ್ಯವಿಲ್ಲ ಎಂದು ಬಿಜೆಪಿ ಹೇಳಿದರು ಅದನ್ನ ಒಪ್ಪಿಕೊಳ್ಳುವುದಕ್ಕೆ ರೆಡಿ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಸದ್ಯ ಕಾಂಗ್ರೆಸ್ ಪಕ್ಷದಲ್ಲೂ ಎಲ್ಲವೂ ಸರಿ ಇಲ್ಲ ಎಂಬುದು ಎದ್ದು ಕಾಣಿಸ್ತಾ ಇದೆ. ಶಾಸಕರು ಆಗಾಗ ಕೆಲವೊಂದು ವಿಚಾರದಲ್ಲಿ ಗರಂ ಆಗ್ತಾನೇ ಇರ್ತಾರೆ. ಭ್ರಷ್ಟಾಚಾರದ ಬಗ್ಗೆಯೂ ಮಾತಾಡ್ತಾ ಇರ್ತಾರೆ. ಇದೀಗ ಬಿಜೆಪಿ ನಾಯಕರೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.






