ಚಿತ್ರದುರ್ಗ | ನಾಯಕನಹಟ್ಟಿ ಪಪಂ ಚುನಾವಣೆ : ಶೇ.83.34 ಮತದಾನ

2 Min Read

ಚಿತ್ರದುರ್ಗ, (ಡಿ.27) :  ನಾಯಕನಹಟ್ಟಿ ಪಪಂ ಸದಸ್ಯರ ಸ್ಥಾನಗಳಿಗೆ ಸೋಮವಾರ ಜರುಗಿದ ಚುನಾವಣೆಯಲ್ಲಿ ಶೇ.83.34 ಪ್ರಮಾಣದ ಮತದಾನವಾಗಿದೆ.

16 ವಾರ್ಡ್ ಗಳಲ್ಲಿನ 5087 ಪುರುಷರು, 5223 ಮಹಿಳೆಯರು ಸೇರಿದಂತೆ ಒಟ್ಟಾರೆ 10,310 ಮತದಾರರು ಹಕ್ಕು ಚಲಾಯಿಸಿದರು.

ಅತಿ ಹೆಚ್ಚಿನ ಮತದಾನ 3 ನೇ ವಾರ್ಡನಲ್ಲಿ ಶೇ. 92.19 ಹಾಗೂ ಅತಿ ಕಡಿಮೆ ಮತದಾನ 6 ನೇ ವಾರ್ಡನಲ್ಲಿ ಶೇ. 71.33 ಪ್ರಮಾಣದಲ್ಲಿ ಜರುಗಿದೆ.
ಮೊದಲ ಸೆಕ್ಟರ್‍ನಲ್ಲಿ 8 ವಾರ್ಡಗಳಿವೆ ಎರಡನೇ ವಾರ್ಡನಲ್ಲಿ 8 ವಾರ್ಡಗಳಿವೆ. ಮೊದಲ ಸೆಕ್ಟರ್ ನಲ್ಲಿ ಚಲಾಯಿಸಿದ ಮತದಾನದ ವಿವರ ಹೀಗಿದೆ.
1 ನೇ ವಾರ್ಡನಲ್ಲಿ ಶೇ.79.1,
2 ನೇ ವಾರ್ಡನಲ್ಲಿ ಶೇ. 88.39,
3 ನೇ ವಾರ್ಡನಲ್ಲಿ ಶೇ.92.19,
4 ನೇ ವಾರ್ಡನಲ್ಲಿ ಶೇ. 86.48,
5 ನೇ ವಾರ್ಡನಲ್ಲಿ 78.95,
6 ನೇ ವಾರ್ಡನಲ್ಲಿ ಶೇ. 71.33,
7 ನೇ ವಾರ್ಡನಲ್ಲಿ ಶೇ. 84.75,
8 ನೇ ವಾರ್ಡನಲ್ಲಿ ಶೇ.91.06,

ಎರಡನೇ ಸೆಕ್ಟರ್ ನಲ್ಲಿದ್ದ 8 ಮತದಾಕೇಂದ್ರಗಳಲ್ಲಿ ಜರುಗಿದ ಮತದಾನದ ವಿವರ ಹೀಗಿದೆ.
9 ನೇ ವಾರ್ಡನಲ್ಲಿ ಶೇ. 90.06,
10 ನೇ ವಾರ್ಡನಲ್ಲಿ ಶೇ.83.33,
11 ನೇ ವಾರ್ಡನಲ್ಲಿ ಶೇ. 74.57,
12 ನೇ ವಾರ್ಡನಲ್ಲಿ ಶೇ. 79.05,
13 ನೇ ವಾರ್ಡನಲ್ಲಿ ಶೇ. 82.79,
14 ನೇ ವಾರ್ಡನಲ್ಲಿ 85.71,
15 ನೇ ವಾರ್ಡನಲ್ಲಿ 83.79,
16 ನೇ ವಾರ್ಡನಲ್ಲಿ ಶೇ. 87.06 ಮತದಾನವಾಗಿದೆ. ಬೆಳಗ್ಗೆ ನೀರಸವಾಗಿ ಆರಂಭವಾದ ಮತದಾನ ಮಧ್ಹಾಹ್ನ ದ ವೇಳಗೆ ಅತಿ ಚುರುಕಿನಿಂದ ಜರುಗಿತು.
ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನೀಕೇರಿ ಹಾಗೂ ಎಸ್ಪಿ ಜಿ.ರಾಧಿಕ,ತಹಸೀಲ್ದಾರ್ ಎನ್.ರಘುಮೂರ್ತಿ ಮತಕೇಂದ್ರಗಳಿಗೆ ಭೇಟಿ ನೀಡಿದರು.

ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತದಾನ ಕೇಂದ್ರಕ್ಕೆ ಭೇಟಿ ನೀಡಿದಾಗ 10 ನೇ ವಾರ್ಡನ 102 ವರ್ಷದ ತಿಪ್ಪಮ್ಮ  ಮತಕೇಂದ್ರಕ್ಕೆ ಬಂದಿದ್ದರು. ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಅಜ್ಜಿಯೊಂದಿಗೆ ಉಭಯ ಕುಶಲೋಪರಿ ನಡೆಸಿದರು. ಅಜ್ಜಿ ಅತ್ಯಂತ ವಿಶ್ವಾಸ ಹಾಗೂ ಧೈರ್ಯದಿಂದ ಮತಕೇಂದ್ರಕ್ಕೆ ಬಂದಿರುವುದನ್ನು ಕಂಡು ಸಂತಸಗೊಂಡರು. ತಕ್ಷಣ ಶಾಲು ಹಾಗೂ ಹೂವಿನ ಹಾರವನ್ನು ತರಿಸಿದರು. ನಂತರ ಡಿಸಿ ಹಾಗೂ ಎಸ್ಪಿ ಅಜ್ಜಿಗೆ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿ, ಗೌರವಿಸಿದರು. ನಂತರ ಪಟ್ಟಣದ ನಾನಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಸಣ್ಣ ಪುಟ್ಟ ಘಟನೆಗಳನ್ನು ಹೊರತುಪಡಿಸಿ ಒಟ್ಟಾರೆ ಮತದಾನ ಶಾಂತಿಯುತವಾಗಿತ್ತು. 1 ಡಿವೈಎಸ್ಪಿ,2 ಸಿಪಿಐ, 3 ಪಿಎಸ್‍ಐ, 8 ಎಎಸ್‍ಐ, 23 ಹೆಚ್‍ಸಿ 4 ಮಹಿಳಾ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಮತ ಎಣಿಕೆ ಡಿ.30 ರ ಗುರುವಾರ ಚಳ್ಳಕೆರೆ ಯ ಹೆಚ್‍ಪಿಸಿಸಿ ಕಾಲೇಜಿನಲ್ಲಿ ಜರುಗಲಿದೆ.

Share This Article
Leave a Comment

Leave a Reply

Your email address will not be published. Required fields are marked *