ಹಾರ್ಟ್ ಅಟ್ಯಾಕ್ ನಿಂದ ತುಮಕೂರಿನಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡ ಸಾವು..!

1 Min Read

 

 

ತುಮಕೂರು: ಬೆಳಗ್ಗೆ ಆದ್ರೆ ಒಂದಲ್ಲ ಒಂದು ಹಾರ್ಟ್ ಅಟ್ಯಾಕ್ ಸ್ಟೋರಿ ಇದ್ದೆ ಇರುತ್ತೆ. ಹಾಸನದಲ್ಲಂತೂ ಹಾರ್ಟ್ ಅಟ್ಯಾಕ್ ನಿಂದ ಸತ್ತವರು ಸಾಕಷ್ಟು ಮಂದಿ ಇದ್ದಾರೆ. ಪ್ರತಿ ದಿನ ಒಬ್ಬರು, ಇಬ್ಬರು ಸಾವನ್ನಪ್ಪಿದ್ದಾರೆ. ನಿನ್ನೆ ಶಿವಮೊಗ್ಗದಲ್ಲೂ ಇಬ್ಬರು ಸಾವನ್ನಪ್ಪಿದ್ದರು. ಇದೀಗ ತುಮಕೂರಿನಲ್ಲೂ ಹಾರ್ಟ್ ಅಟ್ಯಾಕ್ ನಿಂದ ಬಿಜೆಪಿಯ ಯುವ ಮೋರ್ಚಾ ಮುಖಂಡರೊಬ್ಬರು ಸಾವನ್ನಪ್ಪಿದ್ದಾರೆ.

ಹೆಬ್ಬಾಕ ನೀಲಕಂಠಸ್ವಾಮಿ ಹಾರ್ಟ್ ಅಟ್ಯಾಕ್ ನಿಂದ ನಿಧನರಾಗಿರುವವರು. ಇವರಿಗೆ ಈಗಿನ್ನು 36 ವರ್ಷ ವಯಸ್ಸು. ಮಗಳನ್ನ ಶಾಲೆಗೆ ಬಿಟ್ಟು ಬರುವಾಗ ಎದೆ ನೋವು ಕಾಣಿಸಿಕೊಂಡಿದೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರು ಅದರಿಂದ ಪ್ರಯೋಜನವಾಗಿಲ್ಲ. ಹಾರ್ಟ್ ಅಟ್ಯಾಕ್ ಎಂಬ ಭೂತದಿಂದ ಉಸಿರು ಚೆಲ್ಲಿದ್ದಾರೆ. ನೀಲಕಂಠಸ್ವಾಮಿ ಮನೆಯಲ್ಲಿ ದುಃಖ ಮಡುಗಟ್ಟಿದೆ. ಸಣ್ಣ ಸಣ್ಣ ವಯಸ್ಸಿನವರನ್ನೆರ ಈ ಹಾರ್ಟ್‌ ಅಟ್ಯಾಕ್ ಎಂಬ ಭೂತ ಹೀಗೆ ಎತ್ತಿಕೊಂಡು ಹೋದರೆ ಹೇಗೆ ಎಂಬ ಪ್ರಶ್ನೆ ಎಲ್ಲರನ್ನ ಕಾಡುತ್ತಿದೆ.

ನೀಲಕಂಠಸ್ವಾಮಿ ತುಮಕೂರಿನ ಕುವೆಂಪು ನಗರದಲ್ಲಿ ವಾಸವಾಗಿದ್ದರು. ಮಗಳನ್ನು ಶಾಲೆಗೆ ಬಿಟ್ಟು ಬಂದ ಬಳಿಕ ಎದೆನೋವು ಕಾಣಿಸಿಕೊಂಡಿದೆ, ತಲೆ ಸುತ್ತಿ ಬಿದ್ದಿದ್ದಾರೆ. ತಕ್ಷಣ ಅವರನ್ನು ಹತ್ತಿರದಲ್ಲಿಯೇ ಇದ್ದ ಸಿದ್ದಗಂಗಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ನೀಡುವ ಎಲ್ಲಾ ಪ್ರಯತ್ನ ಕೂಡ ನಡೆದಿತ್ತು. ಆದರೆ ಅದು ಫಲಿಸಲೇ ಇಲ್ಲ. ನೀಲಕಂಠಸ್ವಾಮಿ ನಿಧನರಾಗಿದ್ದಾರೆ. ಆ ಮಗಳಿಗೆ ಅದೇ ಕೊನೆಯ ಭೇಟಿ, ಅಪ್ಪ ಇನ್ಯಾವತ್ತು ಶಾಲೆಗೆ ಬಿಡುವುದಕ್ಕೆ ಬರಲ್ಲ ಅನ್ನೋದನ್ನ ಹೇಗೆ ಜೀರ್ಣಿಸಿಕೊಳ್ಳುತ್ತಾಳೆ. ಹಾಸನ, ವಿಜಯಪುರ, ಶಿವಮೊಗ್ಗ, ಚಿಕ್ಕಮಗಳೂರು ಈ ಭಾಗದಲ್ಲಿಯೇ ಹಾರ್ಟ್ ಅಟ್ಯಾಕ್ ಜಾಸ್ತಿಯಾಗಿದೆ. ಸದ್ಯದ ಸ್ಥಿತಿಯಲ್ಲಿ ನಮ್ಮ ಜೀವನ ಶೈಲಿಯೂ ಇಲ್ಲಿ ಬಹಳ ಮುಖ್ಯವಾಗುತ್ತದೆ. ದೇಹಕ್ಕೆ ಒಂದಿಷ್ಟು ವ್ಯಾಯಾಮ, ಉತ್ತಮವಾದ ಊಟ, ಒಂದೊಳ್ಳೆ ನಿದ್ದೆ ಮಾಡುವ ಅಭ್ಯಾಸವನ್ನ ಜನ ಮಾಡಿಕೊಳ್ಳಬೇಕು.

Share This Article
Leave a Comment

Leave a Reply

Your email address will not be published. Required fields are marked *