ರಾಮನಗರ: ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಣತೊಟ್ಟು ನಿಂತಿದೆ. ರೈತರ ಅನುಕೂಲವಾಗಲೆಂದು ಮೇಕೆದಾಟು ಯೋಜನೆ ಜಾರಿಯಾಗಲೇಬೇಕೆಂದು ಪಾದಯಾತ್ರೆ ಮಾಡಲು ಸಮಯ ಗೊತ್ತು ಮಾಡಿದೆ. ಈ ಬೆನ್ನಲ್ಲೇ ಪಂಚೆ ಹಾಕಿದವರೆಲ್ಲಾ ರೈತರಾಗಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವ್ರಿಗೆ ಟಾಂಗ್ ಕೊಟ್ಟಿದ್ದಾರೆ.
ಬಿಡದಿಯ ಕೇತಗಾರನಹಳ್ಳಿಯಲ್ಲಿ ಮಾತನಾಡಿದ ಅವರು, ನಾವೂ ಎದೆ ಮೇಲೆ ಬೋರ್ಡ್ ಹಾಕಿಕೊಂಡು ಓಡಾಡುತ್ತಿಲ್ಲ. ರೈತರ ಮಕ್ಕಳೆಂದು ಜನ ನೋಡಿ ಬಿರುದು ಕೊಟ್ಟಿದ್ದಾರೆ. ಈ ರಾಜ್ಯಕ್ಕೆ ಗೊತ್ತಿದೆ ರಾಜ್ಯಕ್ಕೆ ಕುಮಾರಸ್ವಾಮಿ ಏನು ಕೊಡುಗೆ ನೀಡಿದ್ದಾರೆಂದು. ನೀರಾವರಿ ಯೋಜನೆಗಾಗಿ ದೇವೇಗೌಡರ ಪಟ್ಟ ಪಾಡೆಷ್ಟು ಅನ್ನೋದು ಕೂಡ ಗೊತ್ತಿದೆ.
ಹಾಸನದಲ್ಲಿ ಹೇಳುದ್ರಂತೆ ಏನು ಪಂಚೆ ಹಾಕಿದವರೆಲ್ಲಾ ರೈತರಾಗ್ತಾರಾ..? ಹಾಗಾದ್ರೆ ನಾವೂ ಪಂಚೆ ಹಾಕಿದ್ದೇವೆ ನಾವೂ ರೈತರೆ ಎಂದು. ಪಂಚೆ ಹಾಕಿದವರೆಲ್ಲಾ ರೈತರಾಗಲ್ಲ. ತಲಕಾವೇರಿಯಲ್ಲಿ ಎಲ್ಲರನ್ನು ದೂರ ಕಳುಹಿಸಿ ಅಕ್ಷತೆ ಹಾಕಿದ್ದನ್ನು ನೋಡಿದ್ದೇವೆ. ಮೆಟ್ಟಿಲಿಗೆ ನಮಸ್ಕಾರ ಮಾಡಿದ್ದನ್ನು ನೋಡಿದ್ದೇವೆ. ಏನು ನರೆಂದ್ರ ಮೋದಿಯವರನ್ನು ನೋಡಿಕೊಂಡು ಕಾಪಿ ಮಾಡಿದ್ದ ಎಂದು ತಿರುಗೇಟು ನೀಡಿದ್ದಾರೆ.
ಇನ್ನು ಪಾದಯಾತ್ರೆ ಬಗ್ಗೆ ಮಾತನಾಡಿದ್ದು, ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ನೋಡಿಲ್ವಾ. ಇದೆಲ್ಲಾ ಆರ್ಟಿಫಿಶಿಯಲ್ ಹೋರಾಟಗಳು. ಕೃಷ್ಣೆ ನೀರನ್ನ ಉಳಿಸಿದ್ದನ್ನು ನೋಡಿದ್ದೇವೆ. ಈಗ ಮೇಕೆದಾಟು ಹೋರಾಟ ಮಾಡುತ್ತಿದ್ದಾರೆ ಎಂದಿದ್ದಾರೆ.