ಚಿತ್ರದುರ್ಗ. ಜೂನ್. 29: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚಿತ್ರದುರ್ಗ ಜಿಲ್ಲಾ ಶಾಖೆ, ಸೌಖ್ಯ ಹೆಲ್ತ್ ಮತ್ತು ಸ್ಕಿನ್ ಕೇರ್ ಚಿತ್ರದುರ್ಗ ಸಹಯೋಗದೊಂದಿಗೆ ವಿಶ್ವ ವೈದ್ಯರ ದಿನಾಚರಣೆ ಅಂಗವಾಗಿ ಜುಲೈ 01ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ನಗರದ ವಿ.ಪಿ.ಬಡಾವಣೆಯ ಅರಣ್ಯ ಇಲಾಖೆ ವಸತಿಗೃಹ ಮುಂಭಾಗದ ಜೆ.ಸಿ.ಆರ್ ಮುಖ್ಯರಸ್ತೆಯಲ್ಲಿ “ಉಚಿತ ಆರೋಗ್ಯ ತಪಾಸಣಾ ಶಿಬಿರ” ಆಯೋಜಿಸಲಾಗಿದೆ. ವಿಶ್ವ ವೈದ್ಯರ ದಿನಾಚರಣೆ ಅಂಗವಾಗಿ ಬಿ.ಪಿ, ಶುಗರ್, ಚರ್ಮರೋಗ ತಪಾಸಣೆ, ದಂತ ಚಿಕಿತ್ಸಾ ಸಲಹೆ ಹಾಗೂ ಕಣ್ಣುಗಳನ್ನು ನುರಿತ ತಜ್ಞರಿಂದ ಪರಿಶೀಲಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.






