ಹಾಸನ: ಜಿಲ್ಲೆಯ ಜನ ಆತಂಕಗೊಳ್ಳುವಂತ ವಾತಾವರಣವನ್ನ ನಿರ್ಮಾಣ ಮಾಡಿದೆ ಈ ಹಾರ್ಟ್ ಅಟ್ಯಾಕ್ ಎಂಬುದು. ಒಂದಲ್ಲ ಎರಡಲ್ಲ ಬರೋಬ್ಬರು 18 ಜನ ಈ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅದು ಒಂದೇ ತಿಂಗಳಲ್ಲಿ. ಈ ಬೆಳವಣಿಗೆ ಸಹಜವಾಗಿಯೇ ಆತಂಕ ಮೂಡಿಸುವುದಿಲ್ಲವೇ. ಈ ಸಂಬಂಧ ಹಲವರು ಈಗಾಗಲೇ ಪ್ರಶ್ನೆಯನ್ನು ಹಾಕಿಕೊಂಡಿದ್ದರು. ಹಾಸನದಲ್ಲಿಯೇ ಯಾಕೆ ಇಷ್ಟೊಂದು ಹಾರ್ಟ್ ಅಟ್ಯಾಕ್ ಅಂತ. ಈ ಪ್ರಶ್ನೆಗೆ ಇದೀಗ ಡಾ.ಮಂಜುನಾಥ್ ಉತ್ತರ ನೀಡಿದ್ದಾರೆ.
ಹೃದಯಾಘಾತದಿಂದ ಆಗುವ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ರಾಜ್ಯದ ತಾಲೂಕು ಆಸ್ಪತ್ರೆಗಳಲ್ಲಿ ಸ್ಟೆಲಿ ಯೋಜನೆಯನ್ನು ಜಾರಿ ಮಾಡಲಾಗಿದೆ. ಆದರೆ ಆ ಸ್ಡೆಮಿ ಹಾಸನದಲ್ಲಿ ಇಲ್ಲ. ಈ ಸ್ಟೆಮಿ ಯೋಜನೆ ಹಾಸನದಲ್ಲಿ ಇಲ್ಲದೆ ಇರುವ ಕಾರಣದಿಂದ ಹಾಸನದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿರಬಹುದು ಎಂದಿದ್ದಾರೆ. ಸ್ಟೆಮಿ ಯೋಜನೆಯು ಹೃದಯಾಘಾತದಿಂದ ಆಗುವ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ರೂಪಿಸಲಾದ ಒಂದು ನವೀನ ಚಿಕಿತ್ಸಾ ಕಾರ್ಯಕ್ರಮವಾಗಿದೆ. ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿದೆ. ಜಯದೇವ ಹೃದಯ ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಈ ಯೋಜನೆಯನ್ನು ರಾಜ್ಯದ 86 ತಾಲೂಕು ಆಸ್ಪತ್ರೆಗಳಲ್ಲಿ ಜಾರಿಗೊಳಿಸಿದೆ. ಹೃದಯಾಘಾತದ ಲಕ್ಷಣಗಳೊಂದಿಗೆ (ಎದೆನೋವು, ಉಸಿರಾಟದ ತೊಂದರೆ) ರೋಗಿಗಳು ತಾಲ್ಲೂಕು ಆಸ್ಪತ್ರೆಗೆ ಆಗಮಿಸಿದಾಗ, ತಕ್ಷಣವೇ ಇಸಿಜಿ (ECG) ಪರೀಕ್ಷೆ ನಡೆಸಿ, ಆ ಮಾಹಿತಿಯನ್ನು ಜಯದೇವ ಆಸ್ಪತ್ರೆಯ ಹೃದಯರೋಗ ತಜ್ಞರಿಗೆ ರವಾನಿಸಲಾಗುತ್ತದೆ. ಜಯದೇವದ ನುರಿತ ವೈದ್ಯರು ಈ ಡೇಟಾವನ್ನು ವಿಶ್ಲೇಷಿಸಿ, ರೋಗದ ತೀವ್ರತೆಯನ್ನು ಗುರುತಿಸಿ, ತಾಲ್ಲೂಕು ಆಸ್ಪತ್ರೆಯ ವೈದ್ಯರಿಗೆ ತ್ವರಿತ ಚಿಕಿತ್ಸೆಗೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ.






