ಬೆಂಗಳೂರು: ಬಿಗ್ ಬಾಸ್ ಖ್ಯಾತಿ ಪ್ರಶಾಂತ್ ಸಂಬರ್ಗಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಾಂಗ್ರೆಸ್ ವಿರುದ್ಧ ಯಾವಾಗಲೂ ಆಕ್ರೋಶ ವ್ಯಕ್ತಪಡಿಸುವ ಪ್ರಶಾಂತ್ ಸಂಬರಗಿ ಇತ್ತೀಚೆಗೆ ಡಿಕೆ ಶಿವಕುಮಾರ್ ಬಗ್ಗೆ ಪೋಸ್ಟ್ ವೊಂದನ್ನ ಹಾಕಿದ್ರು. ಆ ಕಾರಣ ಇದೀಗ ಅವರ ವಿರುದ್ಧ ಕೇಸ್ ದಾಖಲಾಗಿದೆ.
ಇತ್ತೀಚೆಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶದನದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲಾಗಿತ್ತು. ವಿರೋಧ ಪಕ್ಷದವರಿಗೆ ಮಾಹಿತಿಯೇ ಇಲ್ಲದೆ ತರಾತುರಿಯಲ್ಲಿ ಈ ಕಾಯ್ದೆ ಜಾರಿಗೆ ತಂದಿದ್ದಾರೆಂದು ಕೋಪದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಸೂದೆಯ ಪ್ರತಿಯನ್ನ ಹರಿದು ಹಾಕಿದ್ದರು.
ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದ ಸಂಬರಗಿ, ‘ದೊಡ್ಡ ದೊಡ್ಡ ಬಂಡೆಗಳ‌್ಮ ಒಡೆದು ಹಾಕಿದ್ದವನಿಗೆ, anti conversion ಬಿಲ್ಲು ಹರಿಯೋದು ಕಷ್ಟವೇನಲ್ಲ. ಬಿಡಿ.kd Shivakumar’ ಎಂದು ಪೋಸ್ಟ್ ಹಾಕಿದ್ದರು. ಇದರ ವಿರುದ್ಧ ನಾರಾಯಣ ಸ್ವಾಮಿ ಎಂಬುವವರು ದೂರು ದಾಖಲಿಸಿದ್ದಾರೆ. ಡಿ ಕೆ ಶಿವಕುಮಾರ್ ವಿರೋಧಿಸುವ ಭರದಲ್ಲಿ, ಕೋಮು ಕರೀನಾ ಪ್ರಚೋದನೆ ಮಾಡಲಾಗಿದೆ ಎಂದಿದ್ದಾರೆ. ಈ ಸಂಬಂಧ ಸೌತ್ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.