Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮುಸ್ಲಿಮರು ಬಿಜೆಪಿ ಬಾವುಟ ಇಡ್ಕೊಂಡು ಮೋದಿಜೀ ಜಿಂದಾಬಾದ್ ಅಂತ ಕೂಗಲ್ವಾ..? ಮೀಸಲಾತಿ ವಿಚಾರಕ್ಕೆ ಈಶ್ವರಪ್ಪ ಹೇಳಿದ್ದೇನು..?

---Advertisement---

ಶಿವಮೊಗ್ಗ; ಮುಸ್ಲಿಮರಿಗೆ ವಸತಿ ಯೋಜನೆಯಲ್ಲಿ ಮೀಸಲಾತಿ ವಿಚಾರ ಈಗ ರಾಜ್ಯದಲ್ಲಿ ಜೋರು ಚರ್ಚೆಯಲ್ಲಿದೆ. ಈ ಬಗ್ಗೆ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಇವತ್ತಲ್ಲ ನಾಳೆ ದೇಶದಲ್ಲಿ, ಕರ್ನಾಟಕ ಬಿಡಿ ಅನೇಕ ರಾಜ್ಯದಲ್ಲಿ ಕಾಂಗ್ರೆಸ್ ಬಿಟ್ಟು ಭಾರತೀಯ ಜನತಾ ಪಾರ್ಟಿಗೆ ಮುಸಲ್ಮಾನರು ವೋಟ್ ಹಾಕಿದ್ದಾರೆ ತಾನೆ.‌ ನರೇಂದ್ರ ಮೋದಿಜೀ ಜಿಂದಾಬಾದ್ ಅಂತ ಕೂಗ್ತಾರೆ ತಾನೇ, ಬಿಜೆಪಿ ಬಾವುಟ ಇಡ್ಕೊಂಡು ಹೋಗ್ತಾರೆ ತಾನೇ. ಅದಕ್ಕೋಸ್ಕರ ಹೇಳ್ತಾ ಇರೋದು. ಯಾರೂ ಅಧಿಕಾರಕ್ಕೆ ಬರ್ತಾರೆ ಅಂತ ಗೊತ್ತಾಗುತ್ತೊ ಅವರ ಕಡೆಗೆ ಮುಸಲ್ಮಾನರು ತಿರುಗುತ್ತಾರೆ. ಅಧಿಕಾರ ಇರೋ ಕಡೆ ಮುಸಲ್ಮಾನರು ಹೋಗ್ತಾರೆ.

ಹೀಗಾಗಿ ನಾವೂ ಅಧಿಕಾರದಲ್ಲಿ ಇರೋದು ನಾವೂ, ನಾವೇ ಮುಸಲ್ಮಾನರ ಪರ ಹೋಗಿಬಿಟ್ಟರೆ ರಗಳೆ ಇರಲ್ಲ ಅಂತ ಕಾಂಗ್ರೆಸ್ ನವರು ನೇರ ಮುಸಲ್ಮಾನರಿಗೆ ಬೆಂಬಲ ಕಿಟ್ಟುಕೊಂಡು ಹೋಗ್ತಿದ್ದಾರೆ. ಪ್ರಹ್ಲಾದ್ ಜೋಶಿ ಅವರು ಹೇಳಿದ್ದನ್ನ ನಾನು ಪೇಪರ್ ನಲ್ಲಿ ಓದಿದ್ದೀನಿ. ಕೇಂದ್ರ ಸಚಿವರು, ಜವಾಬ್ದಾರಿ ಇರುವವರು, ಎಲ್ಲಿ ಆ ರೀತಿ ಹೇಳಿಕೆ ಬಂದಿದೆ ಅದನ್ನ ತೋರಿಸಿ ಅಂದಿದ್ದಾರೆ. ಈ ಸುಳ್ಳಿನ ಸರ್ದಾರರು ಇದ್ದಾರಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಆ ಲಾಡ್ ಎನ್ನುವವರು ಬರೀ ಸುಳ್ಳರ. 15% ಮುಸಲ್ಮಾನರಿಗಿದೆ, ತೋರಿಸಿ ಹಾಗಾದ್ರೆ ಅದನ್ನೆ ಪ್ರಹ್ಲಾದ್ ಜೋಶಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ.

ಗೈಡ್ ಲೈನ್ಸ್ ಏನಿದೆ ಅದು ನಂಗೆ ಗೊತ್ತಿಲ್ಲ. ಆದೇಶದಲ್ಲಿ ಬಿಲ್ಕುಲ್ 15% ಇಲ್ಲ ಅಂತ ಜೋಶಿ ಅವರು ಹೇಳಿದ್ದಾರೆ. ಧರ್ಮಾಧಾರಿತ ರಾಜಕಾರಣ ಬೇಡ ಅಂತ ನಾನೇಳಿದ್ದಲ್ಲ. ಆ ಮಹಾಪುರುಷ ಅಂಬೇಡ್ಕರ್ ಅವರು ಹೇಳಿದ್ದು. ಹಿಂದೂಗಳೇನು ಮನುಷ್ಯರಲ್ವಾ, ಬಡವರಿಲ್ವಾ..? ಎಲ್ಲಾ ಧರ್ಮದವರಿಗೂ ಒಂದೇ ಕಾನೂನು ಅಂದ್ಮೇಲ ಮುಸ್ಲಿಮರಿಗೆ ಬೇರೆ ಕಾನೂನು ಯಾಕೆ ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment