ಥಗ್ ಲೈಫ್ ರಿಲೀಸ್ ಗೆ ಸುಪ್ರೀಂ ಕೋರ್ಟ್ ಸೂಚನೆ : ರಾಜ್ಯ ಸರ್ಕಾರ ಒದಗಿಸುತ್ತಾ ಭದ್ರತೆ..?

ಕಮಲ್ ಹಾಸನ್ ಅವರ ಥಗ್ ಲೈಫ್ ಇದೀಗ ಸುಪ್ರೀಂ ಕೋರ್ಟ್ ನಲ್ಲಿದೆ. ಇದೀಗ ಸುಪ್ರೀಂ ಕೋರ್ಟ್ ಥಗ್ ಲೈಫ್ ಪರವಾಗಿ ಆದೇಶ ನೀಡಿದೆ. ರಾಜ್ಯದಲ್ಲಿ ರಿಲೀಸ್ ಮಾಡುವುದಕ್ಕೆ ಅವಕಾಶ ಕೊಡಬೇಕೆಂದು ಸೂಚಿಸಿದೆ. ಥಗ್ ಲೈಫ್ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದು ಹೀಗೆ, ಗೂಂಡಾಗಳ ಗುಂಪು ಯಾವ ಸಿನಿಮಾವನ್ನು ಪ್ರದರ್ಶನ ಮಾಡಬೇಕು, ಯಾವ ಸಿನಿಮಾ ಪ್ರದರ್ಶನ ಮಾಡಬಾರದು ಎಂದಬುದನ್ನು ನಿರ್ಧರಿಸಲಾಗದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಯಾರಾದರೂ ಒಂದು ಹೇಳಿಕೆ ನೀಡಿದರೆ ಅದಕ್ಕೆ ವಿರುದ್ಧವಾಗಿ‌ ನೀವೂ ಹೇಳಿಕೆ ನೀಡಿ. ಆದರೆ ಚಿತ್ರಮಂದಿರಗಳನ್ನು ಸುಟ್ಟು ಹಾಕುತ್ತೇವೆ ಎಂದು ಬೆದರಿಸುವುದು ಕಾನೂನಿಗೆ ವಿರುದ್ಧ. ಕಮಲ್ ಹಾಸನ್ ಹೇಳಿಕೆಯನ್ನು ಒಪ್ಪುವುದು, ಒಪ್ಪದೆ ಇರುವುದು ಕರ್ನಾಟಕ ಜನತೆಗೆ ಬಿಟ್ಟಿದ್ದು. ಆದರೆ ಮೂಲಭೂತ ಹಕ್ಕುಗಳ ರಕ್ಷಣೆ ಆಗಲೇಬೇಕು. ಬೆಂಗಳೂರಿನ ಜಾಗೃತ ಜನತೆಗೆ ಕಮಲ್ ಹಾಸನ್ ಹೇಳಿಕೆ ತಪ್ಪಾದಲ್ಲಿ ಸರಿ ಯಾವುದು ಅದನ್ನ ಹೇಳಲಿ. ಆದರೆ ಚಿತ್ರಮಂದಿರಗಳಿಗೆ ಬೆಂಕಿ ಹಚ್ವುತ್ತೇವೆ ಎನ್ನುವುದು ಎಷ್ಟು ಸರಿ.

ಸಿಬಿಎಫ್ಸಿಯಿಂದ ಪ್ರಮಾಣ ಪತ್ರ ತೆಗೆದುಕೊಂಡ ಸಿನಿಮಾ ರಿಲೀಸ್ ಆಗಲೇಬೇಕು. ಸಿನಿಮಾ ನೋಡಬೇಕೆ ಬೇಡವೇ ಎಂಬುದು ಜನರಿಗೆ ಬಿಟ್ಟ ನಿರ್ಧಾರ. ಒತ್ತಾಯ ಪೂರ್ವಕವಾಗಿ ಸಿನಿಮಾ ಬಿಡುಗಡೆ ಮಾಡದಂತೆ ತಡೆಯವುದು ಸೂಕ್ತವಲ್ಲ ಎಂದೇ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಇದೀಗ ಸುಪ್ರೀಂ ಕೋರ್ಟ್ ಸಿನಿಮಾ ರಿಲೀಸ್ ಗೆ ಸೂಚನೆ ನೀಡಿದೆ. ಇತ್ತ ಕನ್ನಡ ಪರ ಹೋರಾಟಗಾರರು ಸಿನಿಮಾ ರಿಲೀಸ್‌ ಮಾಡುವುದಕ್ಕೆ ಬಿಡಲ್ಲ ಎಂದಿದ್ದಾರೆ. ಈಗ ರಾಜ್ಯ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *