ಸುದ್ದಿಒನ್, ಹಿರಿಯೂರು, ಜೂನ್. 12 : ಮನೆ ಮುಂದೆ ನಿಂತಿದ್ದ ಕಾರಿನ ಗ್ಲಾಸ್ ಒಡೆದು ಲಕ್ಷಾಂತರ ರೂಪಾಯಿ ಹಣವನ್ನು ಕಳ್ಳರು ದೋಚಿ ಪರಾರಿಯಾದ ಘಟನೆ ನಗರದ ಶ್ರೀ ತೇರು ಮಲ್ಲೇಶ್ವರ ಸಮುಪ ರಸ್ತೆಯೊಂದರಲ್ಲಿ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಕಪ್ಪು ಕಲರ್ ಪಲ್ಸರ್ ಬೈಕ್ ಬಂದ ಇಬ್ಬರು ಖದೀಮರಿಲ್ಲಿ ಓರ್ವ ವ್ಯಕ್ತಿ ತಲೆಗೆ ಹೆಲ್ಮೆಟ್ ಧರಿಸಿಕೊಂಡು ಬಂದು ಹಿಂದೆ ಮುಂದೆ ನೋಡುತ್ತಾ ಕಾರಿನಲ್ಲಿದ್ದ ಹಣವನ್ನು ದೋಚಿಕೊಂಡು ಹೋಗಿದ್ದಾರೆ. ಸ್ಥಳಕ್ಕೆ ನಗರ ಪೊಲೀಸ್ ಠಾಣೆ ಸಿಪಿಐ ರಾಘವೇಂದ್ರ ಕಾಂಡಿಕೆ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಣ ಮಾಲೀಕ ಯಾರು, ಯಾಕೆ ಕಾರಿನಲ್ಲಿಟ್ಟಿದ್ದರು ಎಂಬ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಹಿರಿಯೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.










