ನವದೆಹಲಿ; ಪ್ರತಿಯೊಬ್ಬ ಮಧ್ಯಮ ವರ್ಗದ ಜನ ಇಎಂಐ ಭೂತದ ಜೊತೆಗೆ ಬದುಕು ಸಾಗಿಸುತ್ತಾ ಇರುತ್ತಾರೆ. ಸಂಬಳ ಬಂತು ಅಂದ್ರೆ ಸಾಕು ಟಕ್ ಟಕ್ ಅಂತ ಇಎಂಐಗೆ ಹಣ ಖರ್ಚಾಗ್ತಾ ಇರುತ್ತದೆ. ಇದರ ಜೊತೆಗೆ ಬಡ್ಡಿ ದರದ್ದೆ ಹೆಚ್ಚು ಚಿಂತೆಯಾಗುತ್ತದೆ. ಇದೀಗ ಸಾಲಗಾರರಿಗೆ ಆರ್ಬಿಐ ಗುಡ್ ನ್ಯೂಸ್ ನೀಡಿದೆ. ರೆಪೋ ದರವನ್ನು 50 ಮೂಲಾಂಕಗಳಷ್ಟು ಇಳಿಕೆ ಮಾಡಿದೆ.
ಕ್ಯಾಶ್ ರಿಸರ್ವ್ ರೇಶಿಯೋವನ್ನು ಶೇಕಡ 4 ರಿಂದ ಶೇಕಡ 3ಕ್ಕೆ ಇಳಿಕೆ ಮಾಡಲಾಗಿದೆ. ಸೆಪ್ಟೆಂಬರ್ 6, ಅಕ್ಟೋಬರ್ 4, ನವೆಂಬರ್ 1 ಮತ್ತು ನವೆಂಬರ್ 29ರಂದು ನಾಲ್ಕು ಬಾರಿ ತಲಾ 25 ಮೂಲಾಂಕಗಳಷ್ಟು ಸಿಆರ್ ಆರ್ ಇಳಿಕೆ ಪ್ರಕ್ರಿಯೆ ನಡೆಯುತ್ತದೆ ಎಂದು ತಿಳಿಸಲಾಗಿದೆ. ಇದರಿಂದ ಹಂತ ಹಂತವಾಗಿ ಬ್ಯಾಂಕುಗಳಿಗೆ ಹಣದ ಹರಿವು ಹೆಚ್ಚಾಗುತ್ತಾ ಹೋಗುತ್ತದೆ. ಆರ್ಬಿಐ ಬಳಿ ಹೆಚ್ಚು ಹಣ ಇರುತ್ತದೆ. ಇದರಿಂದ ಮತ್ತಷ್ಟು ಸಾಲ ಕೊಡಲು ಬ್ಯಾಂಕ್ ಗಳಿಗೆ ಸಾಧ್ಯವಾಗುತ್ತದೆ. ಈ ರೆಪೋ ದರ ಇಳಿಕೆ ಮಾಡಿರುವುದರಿಂದ ಸಾಲಗಳಿಗೆ ಬೇಡಿಕೆ ಹೆಚ್ಚುವ ನಿರೀಕ್ಷೆ ಸಿಆರ್ ಆರ್ ಅನ್ನು ಇಳಿಸುವ ಆರ್ಬಿಐ ನಿರ್ಧಾರ ಸರಿಯಾದ ಸಂದರ್ಭದಲ್ಲಿ ಬಂದಿದೆ. ಸಾಲ ಹೆಚ್ಚಾದಾಗ ಜನರ ಖರ್ಚು ವೆಚ್ಚ ಅನುಭೋಗ ಹೆಚ್ಚಾಗುತ್ತದೆ. ಇದು ಆರ್ಥಿಕ ಬೆಳವಣಿಗೆಗೆ ಚುರುಕು ಮೂಡಿಸುತ್ತದೆ ಎನ್ನಬಹುದು.
ಕ್ಯಾಶ್ ರಿಸರ್ವ್ ರೇಶಿಯೋ ಎನ್ನುವುದು ಬ್ಯಾಂಕುವಳು ತಮ್ಮಲ್ಲಿರುವ ಒಟ್ಟಾರೆ ಠೇವಣಿಯಲ್ಲಿ ನಿರ್ದಿಷ್ಟ ಭಾಗವನ್ನು ಆರ್ಬಿಐನಲ್ಲಿ ಇರಿಸಬೇಕು ಎನ್ನುವ ನಿಯಮವಿದೆ. ಉದಾಹರಣೆಗೆ ಸಿಆರ್ಆರ್ ಶೇಕಡ 4 ಎಂದಿದೆ ಅಂದುಕೊಂಡರೆ ಒಂದು ಬ್ಯಾಂಕ್ ತನ್ನ ಗ್ರಾಹಕರಿಂದ ಪಡೆದ ಠೇವಣಿಗಳ ಒಟ್ಟು ಮೊತ್ತ 1000 ಕೋಟಿ ರೂಪಾಯಿ ಆಗುತ್ತದೆ. ಈ ಸಂದರ್ಭದಲ್ಲಿ ಬ್ಯಾಂಕು ಶೇಕಡ 4 ರಷ್ಡು ಹಣವನ್ನು, ಅಂದರೆ 40 ಕೋಡಿ ರೂಪಾಯಿ ಅಷ್ಟು ಹಣವನ್ನು ಆರ್ಬಿಐನಲ್ಲಿ ಇರಿಸಬೇಕು.






