23 ವರ್ಷಗಳ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಹರ್ಭಜನ್ ಸಿಂಗ್..!

ಹರ್ಭಜನ್ ಸಿಂಗ್.. ಟೀಂ ಇಂಡಿಯಾದ ಸ್ಪಿನ್ನರ್. ಇದೀಗ ತನ್ನ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿ, ಭಾವುಕತೆಗೆ ಒಳಗಾಗಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಹರ್ಭಜನ್ ಸಿಂಗ್, ನನ್ನ ಜೀವನವನ್ನೇ ಮುಡುಪಾಗಿಟ್ಟಿದ್ದ ಆಟಕ್ಕೆ ಇಂದು ವಿದಾಯ ಬಿದ್ದಿದೆ. 23 ವರ್ಷಗಳ ಪ್ರಯಾಣವನ್ನ ಸುಂದರವಾಗಿ ಕಟ್ಟಿಕೊಟ್ಟ ಹಾಗೂ ಸ್ಮರಣೀಯವಾಗಿಸಿದ ಎಲ್ಲರಿಗೂ ನನ್ನ ಧನ್ಯವಾದಗಳಯ. ಇವತ್ತಿನವರೆಗೂ ನಡೆದ ಎಲ್ಲಾ ಒಳ್ಳೆಯ ವಿಷಯಕ್ಕೂ ಇಂದು ತೆರೆ ಬಿದ್ದಿದೆ ಎಂದು ಎಲ್ಲರಿಗೂ ಟ್ವೀಟ್ ಮೂಲಕ ಥ್ಯಾಂಕ್ಸ್ ಹೇಳಿದ್ದಾರೆ.

ಇನ್ನು ಹರ್ಭಜನ್ ಸಿಂಗ್ 2016 ಕೊನೆಯ ಬಾರಿಗೆ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ಎಲ್ಲಿಯೂ ಕಾಣಿಸಿಕೊಳ್ಳದ ಭಜ್ಜಿ ಇಂದು ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. 2007 ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಗೆಲ್ಲಿಸಿಕೊಂಡು ಬಂದದ್ರಲ್ಲೂ ಭಜ್ಜಿ ಪಾತ್ರ ಇದೆ. ಈವರೆಗೂ ಭಜ್ಜಿ 103 ಟೆಸ್ಟ್ ಪಂದ್ಯ, 236 ಏಕದಿನ ಪಂದ್ಯ, 28 ಅಂತರಾಷ್ಟ್ರೀಯ ಟಿ20 ಪಂದ್ಯಗಳನ್ನ ಆಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *