Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ರಂಗಭೂಮಿ ಚಟುವಟಿಕೆಗಳು ಮಕ್ಕಳಿಗೆ ವರದಾನ : ಎಂ.ಆರ್.ಮಂಜುನಾಥ್

---Advertisement---

ಸುದ್ದಿಒನ್, ಚಿತ್ರದುರ್ಗ, ಮೇ. 29 : ರಂಗಭೂಮಿ ಚಟುವಟಿಕೆಗಳು ಮಕ್ಕಳಿಗೆ ವರದಾನವಾಗಿದೆ. ಸದಾಕಾಲ ಜಾಲತಾಣಗಳಿಂದ ಕಂಗೆಟ್ಟು ಹೋಗಿರುವ ಮಕ್ಕಳಿಗೆ ರಂಗಭೂಮಿಯು ಆರೋಗ್ಯಪೂರ್ಣ ಬದುಕನ್ನು ಕಲ್ಪಿಸುತ್ತದೆ. ಅತಿ ಚಿಕ್ಕವಯಸ್ಸಿನಲ್ಲಿ ಅನಾರೋಗ್ಯಕ್ಕೆ ತುತ್ತಾಗುವ ಮಕ್ಕಳು ರಂಗಭೂಮಿಯನ್ನು ಆಶ್ರಯಿಸಿ ಬೌದ್ಧಿಕ ಮಟ್ಟವನ್ನು ಬೆಳೆಸಿಕೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್ ಅಭಿಪ್ರಾಯಪಟ್ಟರು.

 

ಮೇ 28ರಂದು ಸಂಜೆ 6-30ಕ್ಕೆ ನಗರದ ಕೋಟೆ ಪ್ರೌಢಶಾಲೆಯ ಪಕ್ಕದಲ್ಲಿರುವ ಹಳೆಯ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪಾಳುಬಿದ್ದ ಕಟ್ಟಡದ ಅವಶೇಷಗಳ ಆವರಣದಲ್ಲಿ ಥಿಯೇಟರ್ ಫೋರ್ಟ್ ವತಿಯಿಂದ ಏರ್ಪಡಿಸಿದ್ದ 25 ದಿನಗಳ ರಂಗ ತರಬೇತಿ ಕಾರ್ಯಾಗಾರದ ನಮ್ಮೂರ ಡ್ರಾಮಾ ಜ್ಯೂನಿಯರ್ಸ್ ಸೀಸನ್ಸ್-3 ಸಮಾರೋಪ ಸಮಾರಂಭವನ್ನು ನಗಾರಿ ನುಡಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ಅಲೆಯಲ್ಲಿ ಬದುಕಿನ ರಂಗಕಲೆನ್ನು ಸಾರ್ವಕಾಲಿಕವಾಗಿ ಪ್ರಚುರ ಪಡಿಸಿದಲ್ಲಿ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಸಾವಿರಾರು ಪ್ರಶಿಕ್ಷಕರನ್ನು ರೂಪಿಸಿದ ಮತ್ತು ನಾವು ಓದಿದ ಡಯಟ್‍ನ ಹಳೆಯ ಸರ್ಕಾರಿ ಕಟ್ಟಡದಲ್ಲಿ ರಂಗ ಶಿಬಿರ ನಡೆಸುತ್ತಿರುವುದು ಸಂತೋಷ ತಂದಿದೆ. ರಂಗಭೂಮಿ ಕಾಯಕಲ್ಪದಿಂದ ಕಟ್ಟಡ ಜೀವಂತಿಕೆಯನ್ನು ಪಡೆದುಕೊಂಡಿದೆ. ಮುಂದೆ ನಡೆಯುವ ರಂಗ ಚಟುವಟಿಕೆಗಳಿಗೆ ಶಿಕ್ಷಣ ಇಲಾಖೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳಿಗೆ ಓದಿನ ಜೊತೆಗೆ ಸಾಂಸ್ಕøತಿಕವಾಗಿರುವ ವಾತಾವರಣ ಪ್ರಿಯವಾಗಿರುತ್ತದೆ. ಪಠ್ಯಾಧಾರಿತ ವಿಷಯವಸ್ತುಗಳನ್ನು ರಂಗ ಚಟುವಟಿಕೆ ಮುಖೇನ ಬೋಧಿಸಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಪೋಷಕರು ಮಕ್ಕಳನ್ನು ಇಂತಹ ರಂಗ ಕಾರ್ಯಾಗಾರಗಳಿಗೆ ಸೇರಿದಬೇಕು. ನಿತ್ಯದ ಬದುಕಿಗೆ ರಂಗಭೂಮಿ ಸಹಕಾರಿಯಾಗಿದೆ. ಶಾಲೆಗಳಲ್ಲಿ ಶಿಕ್ಷಕರು ರಂಗಭೂಮಿಯ ವಿವಿಧ ಆಯಾಮಗಳನ್ನು ಮಕ್ಕಳಿಗೆ ಪರಿಚಯಿಸಬೇಕು ಎಂದರು.

ರಂಗ ನಿರ್ದೇಶಕ ಕೆಪಿಎಂ ಗಣೇಶಯ್ಯ ಮುಖ್ಯಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ ರಂಗಭೂಮಿ ಕ್ಷೇತ್ರವು ಸಂಕೀರ್ಣ ಮತ್ತು ಜಾತಿಮತ ಪಂಥವೆನ್ನದೆ ಸರ್ವರನ್ನೂ ಪ್ರೀತಿಸುವ ಕಲೆಯಾಗಿದೆ. ರಂಗಭೂಮಿ ಚಟುವಟಿಕೆಗಳಿಗೆ ಪೋಷಕರ ಸಹಕಾರದ ಅಗತ್ಯತೆ ಇದೆ. ಬದುಕಿನ ಮೌಲ್ಯಗಳನ್ನು ಜನಮಾನಸದಲ್ಲಿ ಅಚ್ಚಳಿಯದೇ ಉಳಿಸುವ ರಂಗಭೂಮಿ ಕಲಾವಿದರನ್ನು ಪ್ರತಿಯೊಬ್ಬರೂ ಬೆಳೆಸಬೇಕು ಎಂದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್ ಮಾತನಾಡಿ ರಂಗಭೂಮಿ ಕಲಾವಿದರಿಗೆ ನಮ್ಮ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡಲಾಗುತ್ತದೆ ಎಂದರು. ಸರ್ಕಾರಿ ಕಲಾ ಕಾಲೇಜಿನ ಎನ್‍ಎಸ್‍ಎಸ್ ಅಧಿಕಾರಿ ಡಾ.ವಿ.ಪ್ರಸಾದ್ ಮತ್ತು ಘಟಕದ ಸ್ವಯಂ ಸೇವಾ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಪರಿಸರ ಮತ್ತು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದರು.

 

ಪಾಳುಬಿದ್ದ ಡಯಟ್‍ನ ಕಟ್ಟಡದ ಅವಶೇಷಗಳ ನಡುವಿನ ಭವ್ಯ ರಂಗಸಜ್ಜಿಕೆ ಹಾಗೂ ಬೆಳಕಿನ ವಿನ್ಯಾಸದಲ್ಲಿ ರಂಗನಿರ್ದೇಶಕ ಧೀಮಂತ್‍ರಾಮ್ ಇವರ ರಚನೆ ಮತ್ತು ನಿರ್ದೇಶನದಲ್ಲಿ ರಂಗ ತರಬೇತಿ ಶಿಬಿರದ 20ಕ್ಕೂ ಹೆಚ್ಚಿನ ಶಿಬಿರಾರ್ಥಿಗಳು ಆಬ್ರಕಡಾಬ್ರ ಎಂಬ ಹಾರಾರ್ ನಾಟಕ ಪ್ರದರ್ಶನವನ್ನು ಶಿಬಿರದ ಮಕ್ಕಳು ಅದ್ಭುತವಾಗಿ ಅಭಿನಯಿಸಿದರು. ವಾದ್ಯಗಾರ ಹೇಮಂತ್, ಡಾ.ಪ್ರಜ್ವಲ್ ರಂಗ ಸಂಗೀತ ನಿರ್ವಹಿಸಿದರು. ನೂರಕ್ಕೂ ಹೆಚ್ಚು ಪ್ರೇಕ್ಷಕರು ನಾಟಕವನ್ನು ವೀಕ್ಷಿಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...