ಬೆಳಗಾವಿ: ಮತಾಂತರ ನಿಷೇಧ ಕಾಯ್ದೆಯನ್ನ ಇಂದು ಸುವರ್ಣಸೌಧದಲ್ಲಿ ಅಂಗೀಕಾರ ಮಾಡಲಾಗಿದೆ. ಆದ್ರೆ ಇದಕ್ಕೆ ಕಾಂಗ್ರೆಸ್ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಸಂಬಂಧ ಇದೀಗ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಈ ಕಾಯ್ದೆ ತರಲು ಹೊರಟಿದ್ದರು ಎಂದಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗಲೇ ಬಹುತೇಕ ಈ ಕಾಯ್ದೆಯನ್ನ ಜಾರಿಗೆ ತರಲು ಹೊರಟಿದ್ದರು. ಆದ್ರೆ ಈ ಕಾಯ್ದೆಯ ಪ್ರತಿಯನ್ನ ಈಗ ಡಿಕೆ ಶಿವಕುಮಾರ್ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಆದ್ರೆ ಇವತ್ತು ನಾಪಾತ್ತೆಯಾಗಿದ್ದಾರೆ ಎಂದಿದ್ದಾರೆ.
ಇನ್ನು ಈಗಾಗಲೇ ಈ ಕಾಯ್ದೆಯನ್ನ ಎಲ್ಲರೂ ಒಪ್ಪಿದ್ದಾರೆ. ನಾವೂ ಸ್ವಲ್ಪ ಮಾರ್ಪಾಡು ಮಾಡಿದ್ದೇವೆ ಅಷ್ಟೇ. ಆದ್ರೆ ಕಾಂಗ್ರೆಸ್ ಒಣ ಪ್ರತಿಷ್ಟೆಗೆ ಬಿದ್ದು, ಕಾಯ್ದೆಯನ್ನ ವಿರೋಧ ಮಾಡ್ತಾ ಇದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.