ಉಡುಪಿ: ಹೆಣ್ಣು ಮಕ್ಕಳ ಮದುವೆ ವಯಸ್ಸನ್ನ 18ರಿಂದ ಈಗ 21ಕ್ಕೆ ಏರಿಕೆ ಮಾಡಿದೆ ಕೇಂದ್ರ ಸರ್ಕಾರ. ಈ ವಿಚಾರವಾಗಿ ನಿನ್ನೆ ಸ್ವರ್ಣವಲ್ಲಿ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದರು. ಈ ರೀತಿಯ ಕಾನೂನಿಂದ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತೆ ಎಂದಿದ್ದರು. ಇದೀಗ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದು, ಮದುವೆ ವಯಸ್ಸಿಗೂ ಜನಸಂಖ್ಯೆಗೂ ಸಂಬಂಧವಿಲ್ಲ ಎಂದಿದ್ದಾರೆ.
ಜಿಲ್ಲೆಯಲ್ಲಿ ಮಾತನಾಡಿದ ಅವರು, ಮದುವೆ ವಯಸ್ಸು 21 ಆದರೆ ಯುವತಿ ಪದವಿ ಪಡೆದಿರುತ್ತಾಳೆ. 21 ವರ್ಷಕ್ಕೆ ಪ್ರಬುದ್ಧತೆ ಬೆಳೆದಿರುತ್ತೆ. 21 ವರ್ಷಕ್ಕೂ ಮೊದಲು ಯಾರು ಮದುವೆ ಮಾಡಬಾರದು. ಇಡೀ ದೇಶದಲ್ಲಿ 18 ನೇ ವಯಸ್ಸಿಗೆ ಮದುವೆ ಮಾಡುತ್ತಾರೆ ಎಂಬ ಅಭಿಪ್ರಾಯ ತಪ್ಪು.
ನಮ್ಮ ಜಿಲ್ಲೆಯಲ್ಲೇ ಯಾರೂ ಈಗ 18 ನೇ ವಯಸ್ಸಿಗೇನೆ ಮದುವೆ ಮಾಡುತ್ತಿಲ್ಲ. ಈ ಕಾನೂನು ಇಡೀ ದೇಶಕ್ಕೆ ಅನ್ವಯವಾಗುತ್ತೆ. ಬರೀ ಹಿಂದೂಗಳಿಗೆ ಮಾತ್ರ ಅಲ್ಲ. ಈ ಕಾನೂನನ್ನ ದೇಶದಲ್ಲಿ ಎಲ್ಲರೂ ಫಾಲೊ ಮಾಡಬೇಕು. ಸ್ವರ್ಣವಲ್ಲಿ ಮಾತಿಗೆ ನಾನು ವಿರೋಧ ಮಾಡಲ್ಲ ಎಂದಿದ್ದಾರೆ.