ಸುದ್ದಿಒನ್, ಚಿತ್ರದುರ್ಗ, ಮೇ.25 : ನಗರದ ಮಹೇಶ್ ಪಿ.ಯು ಕಾಲೇಜ್, ವಿದ್ಯಾ ವಿಕಾಸ ವಿದ್ಯಾ ಸಂಸ್ಥೆ (ರಿ) 2025 ರ ಏಪ್ರಿಲ್ ನಲ್ಲಿ ನಡೆದ ಕೆ.ಸಿ.ಇ.ಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ವಿವಿಧ ಕೋರ್ಸ್ಗಳಲ್ಲಿ ರಾಜ್ಯದಲ್ಲಿ ಉತ್ತಮ ಶ್ರೇಣಿಯನ್ನು ಪಡೆದಿರುತ್ತಾರೆ.
ಇಂಜಿನೀಯರಿಂಗ್ ವಿಭಾಗದಲ್ಲಿ ಉತ್ತಮ ಶ್ರೇಣಿಯನ್ನು ಪಡೆದ ವಿದ್ಯಾರ್ಥಿ ಗುರುಕಿರಣ್ 4814 ನೇ ರ್ಯಾಂಕ್ ಮತ್ತು ವಿನಯ್ 5883 ನೇ ರ್ಯಾಂಕ್ ಪಡೆದಿರುತ್ತಾರೆ, ಹಾಗೂ ಬಿ.ಎಸ್ಸಿ ಅಗ್ರಿಕಲ್ಚರ್ ವಿಭಾಗದಲ್ಲಿ ವಿನಯ್ 2060 ನೇ ರ್ಯಾಂಕ ಮತ್ತು ನಿತ್ಯ 2870 ನೇ ರ್ಯಾಂಕ್ ಪಡೆದಿರುತ್ತಾರೆ. ಮತ್ತು ವಿನಯ್ ವೆಟರ್ನರಿ, ಬಿ.ಫಾರ್ಮ ಮತ್ತು ಡಿ.ಫಾರ್ಮ ವಿಭಾಗದಲ್ಲಿ ಕ್ರಮವಾಗಿ 4866, 6941 ನೇ ರ್ಯಾಂಕನ್ನು ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ.
ಮಹೇಶ್ ಪಿ.ಯು ಕಾಲೇಜುನಲ್ಲಿ ನೀಟ್, ಜೆ.ಇ.ಇ ಮತ್ತು ಕೆ.ಸಿ.ಇ.ಟಿ ಗೆ ಉತ್ತಮ ತರಬೇತಿಯನ್ನು ಕೊಡುವ ಅತ್ಯುತ್ತಮ ಶಿಕ್ಷಕರನ್ನು ಹಾಗೂ ಶ್ಯೆಕ್ಷಣಿಕ ಯೋಜನೆಯ ಮೂಲಕ ಉತ್ತಮ ತರಬೇತಿಯನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಮುಂದಿನ ಶ್ಯೆಕ್ಷಣಿಕ ವರ್ಷಗಳಲ್ಲಿ ಇನ್ನೂ ಉತ್ತಮ ಫಲಿತಾಂಶವನ್ನು ತರುವ ದೃಷ್ಟಿಯಿಂದ ಮತ್ತು ವಿದ್ಯಾರ್ಥಿಗಳ ಸರ್ವತೋಮುಕ ಬೆಳವಣಿಗೆಗೆ ಸಾಯಂಕಾಲ 5 ರಿಂದ 7.30 ರ ತನಕ ವಿಶೇಷ ತರಗತಿಗಳನ್ನು ನಡೆಸುತ್ತಿದೆ.
2025 ರ ಕೆ.ಸಿ.ಇ.ಟಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಳಿಗೆ ಸಂಸ್ಥೆಯ ಕಾರ್ಯದರ್ಶಿಗಳು, ವಿಜಯ ಕುಮಾರ ಎಸ್. ಎಮ್, ಪೃಥ್ವಿಷಾ, ಪ್ರಾಂಶುಪಾಲ ಕೆಂಚನ ಗೌಡ ಹಾಗೂ ಎಲ್ಲಾ ಬೋಧಕ – ಬೋಧಕೇತರ ಸಿಬ್ಬಂಧಿಯವರು ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.