ನವದೆಹಲಿ; ರಾಮನಗರ ಜಿಲ್ಲೆಯ ಹೆಸರನ್ನು ಬದಲಾಯಿಸಿಯೇ ತೀರುತ್ತೇನೆಂದು ಪಣ ತೊಟ್ಟಿರುವ ಡಿಸಿಎಂ ಡಿಕೆ ಶಿವಕುಮಾರ್, ಸರ್ಕಾರದಿಂದಾನೂ ಗ್ರೀನ್ ಸಿಗ್ನಲ್ ಪಡೆದಿದ್ದಾರೆ. ಈ ಸಂಬಂಧ ಇದೀಗ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ, ಆಕ್ರೋಶ ಹೊರ ಹಾಕಿದ್ದಾರೆ. ಅವರ ಜಮೀನುಗಳಿಗೆ ಬೆಲೆ ಇರಬಹುದು. ಅದಕ್ಕಾಗಿ ರಾಮನಗರವನ್ನ ಬೆಂಗಳೂರು ದಕ್ಷಿಣ ಮಾಡಲು ಹೊರಟಿದ್ದಾರೆ ಎಂದು ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಅಭಿವೃದ್ದಿಯ ದೃಷ್ಟಿಯಲ್ಲಿ ದೊಡ್ಡಬಳ್ಳಾಪುರ, ದೇವನಹಳ್ಳಿ ಸೇರಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಡಲಾಗಿತ್ತು. ಇದೀಗ ಅವರ ಜಮೀನುಗಳಿಗೆ ಬೆಲೆ ಏರಿಸಿಕೊಳ್ಳುವುದಕ್ಕೆ ಹಾಗೇ ಮಾಡಿರಬಹುದು. ಈ ರಾಜಕಾರಣಕ್ಕೆಲ್ಲ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಕೇಂದ್ರ ಗೃಹ ಸಚಿವರಿಗೆ ಕಳುಹಿಸಲಾಗಿದೆ. ಅವರ ಬಳಿ ಇದು ತಿರಸ್ಕೃತವಾಗಿದೆ. ಅದು ನನಗೆ ಗೊತ್ತಿಲ್ಲ. ಇವರು ಶಾಶ್ವತವಾಗಿ ಇರುತ್ತಾರಾ..? ಮುಂದೆ ಬದಲಾಗಲಿದೆ.ಅದು ನನಗೆ ಗೊತ್ತು.
ಯಾಕೆ ಈಗ ಜಮೀನುಗಳಿಗೆ ಬೆಲೆ ಇಲ್ವಾ..? 40 ವರ್ಷದ ಹಿಂದೆ ಖರೀದಿ ಮಾಡಿದ ಜಮೀನಿಗೆ ಎಸ್ಐಟಿ ಏನೋ ಮಾಡಿದ್ದಾರಲ್ಲ. ನನ್ನ ಮೇಲೆ ಗದಾಪ್ರಹಾರ ಮಾಡ್ತಿದ್ದೀರಲ್ಲಾ, ಉ ರು ಮಾಡಿಕೊಂಡಿದ್ದರಲ್ಲಿ ಶೇಕಡ 50ರಷ್ಟು ಸರ್ಕಾರಿ ಜಮೀನುಗಳಿವೆ. ಇವರು ಮಾಡಿರುವುದು ನಮಗೆ ಗೊತ್ತಿದೆ. ಶಾಂತಿನಗರದ ದಲಿತರ ಜಾಗ ನುಂಗಿದ್ದು ಯಾರು..? ರಾಮಕೃಷ್ಣ ಹೆಗಡೆ ಸರ್ಕಾರದದಲ್ಲಿ ಕೊಟ್ಟ ಜಾಗ ನುಂಗಿದ್ದು ಯಾರು..? ಮುಖ್ಯಮಂತ್ರಿ ಸಿದ್ದರಾಮಯ್ಯ ತಾವೂ ಅಹಿಂದ ಎನ್ನುತ್ತಾರೆ. ದಲಿತರ ಭೂಮಿ ಕಬಳಿಸಿದವರನ್ನೇ ಜೊತೆಯಲ್ಲಿ ಇಟ್ಟುಕೊಂಡಿದ್ದಾರೆ. ಈಗೇನೋ ಅವರನ್ನೇ ಮುಖ್ಯಮಂತ್ರಿ ಮಾಡಬೇಕು ಅಂತಿದ್ದಾರೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.






