ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ, (ಡಿ.22) : ವಿಶ್ವಗುರು ಬಸವಣ್ಣನವರಿಗೆ ಮಸಿ ಬಳಿದು ಅವಮಾನ ಮಾಡಿರುವ ಎಂ.ಇ.ಎಸ್.ಮತ್ತು ಶಿವಸೇನೆ ಪುಂಡರನ್ನು ಗಂಡಿಪಾರು ಮಾಡುವಂತೆ ವೀರಶೈವ ಲಿಂಗಾಯತ ಯುವ ವೇದಿಕೆಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಬೆಳಗಾವಿಯಲ್ಲಿ ಕನ್ನಡ ಧ್ವಜ ಸುಟ್ಟು ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ವಿರೂಪಗೊಳಿಸಿ ಅವಮಾನ ಮಾಡಿರುವ ಎಂ.ಇ.ಎಸ್. ಮತ್ತು ಶಿವಸೇನೆ ಕಿಡಿಗೇಡಿಗಳನ್ನು ಶಿಕ್ಷಿಸಿ ರಾಜ್ಯದಿಂದ ಗಡಿಪಾರು ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದೆಂದು ಪ್ರತಿಭಟನಾಕಾರರು ಎಚ್ಚರಿಸಿದರು.
ವೀರಶೈವ ಲಿಂಗಾಯತ ಯುವ ವೇದಿಕೆ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಹೆಚ್.ಎಂ.ಮಂಜುನಾಥ್, ಗೌರವಾಧ್ಯಕ್ಷ ಕೆ.ಸಿ.ಗಂಗಾಧರಪ್ಪ, ಪ್ರಧಾನ ಕಾರ್ಯದರ್ಶಿ ಶಿವಕುಮಾರಸ್ವಾಮಿ, ರಾಜ್ಯ ಕಾರ್ಯದರ್ಶಿ ಪ್ರವೀಣ್‍ಕುಮಾರ್ ಎಸ್.ಎಂ.ಎಲ್, ಉಪಾಧ್ಯಕ್ಷ ಎಂ.ಎಸ್.ಗಿರೀಶ್, ವಿಜಯಕುಮಾರ್ ಎಲ್.ಎಂ, ವಿಜಯಕುಮಾರ್ ಆಲಘಟ್ಟ, ಮನು, ಶಿವು ಜಾಲಿಕಟ್ಟೆ, ಸದಾಶಿವಪ್ಪ ಜಮೀನ್‍ದಾರ್, ಗಾರೆಹಟ್ಟಿ ತಿಪ್ಪೇಸ್ವಾಮಿ, ಜಿತೇಂದ್ರ ಎನ್.ಹುಲಿಕುಂಟೆ, ಚಂದ್ರಪ್ಪ ಸಿ, ಜಯಣ್ಣ, ದೊಡ್ಡಸಿದ್ದವ್ವನಹಳ್ಳಿ ಪರಮೇಶ್, ಜಯಣ್ಣ ಭಟ್ಟರು, ಹರೀಶ್, ಯೋಗೇಶ್ ಯಲಗಟ್ಟಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.