ಬೆಂಗಳೂರು: ಒಂದು ಕಡೆ ಕೊರೊನಾ ಮೂರನೇ ಅಲೆ ಆತಂಕ ಒಂದು ಕಡೆಯಾದ್ರೆ, ಒಮಿಕ್ರಾನ್ ಆತಂಕ ಮತ್ತೊಂದು ಕಡೆ. ದಿನೇ ದಿನೇ ಒಮಿಕ್ರಾನ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಇದು ಸರ್ಕಾರಕ್ಕೂ ತಲೆ ನೋವು ತಂದಿಟ್ಟಿದೆ. ಈ ಬೆನ್ನಲ್ಲೇ ನ್ಯೂ ಇಯರ್ ಹತ್ತಿರವಾಗುತ್ತಿದೆ.
ನ್ಯೂ ಇಯರ್ ಸೆಲೆಬ್ರೇಷನ್ ನಿಂದಾಗಿ ಒಮಿಕ್ರಾನ್ ಹೆಚ್ಚಾಗುವ ಭೀತಿ ಎದುರಾಗಿತ್ತು. ಇದೀಗ ಮುಂಜಾಗ್ರತ ಕ್ರಮವಾಗಿ ಸರ್ಕಾರ ನ್ಯೂ ಇಯರ್ ಸೆಲೆಬ್ರೇಷನ್ ಗೆ ಬ್ರೇಕ್ ಹಾಕಿದೆ. ಡಿಸೆಂಬರ್ 31 ರಿಂದ ಜನವರಿ 2ರವರೆಗೆ ಯಾವುದೇ ಬಹಿರಂಗ ಸಮಾರಂಭ ಮಾಡುವ ಹಾಗಿಲ್ಲ ಎಂದು ಸಿಎಂ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು, ನ್ಯೂ ಇಯರ್ ಬಹಿರಂಗ ಸಂಭ್ರಮಾಚರಣೆ ಮೇಲೆ ನಿರ್ಬಂಧ ಹೇರಲಾಗಿದೆ. ಎಂ ಜಿ ರೋಡ್, ಬ್ರಿಗೇಡ್ ರಸ್ತೆಯಲ್ಲಿ ಸಂಭ್ರಮಕ್ಕೆ ಬ್ರೇಕ್ ಹಾಕಲಾಗಿದೆ. ಬಾರ್, ಪಬ್ ಗಳಲ್ಲಿ ಶೇಕಡ 50% ಅನುಮತಿ ನೀಡಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ಒಮಿಕ್ರಾನ್ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.