ಉತ್ತರ ಪ್ರದೇಶ: ಮಹಿಳೆಯರ ಬಲವರ್ಧನೆ ವಿಚಾರವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಮಹಿಳೆಯರ ಸಬಲೀಕರಣಕ್ಕಾಗಿ ಮಾಡಬೇಕಾದ್ದು ಬೇರೆನೆ ಇದೆ ಎಲ್ಪಿಜಿ ಗ್ಯಾಸ್ ಕೊಡೋದು, ಟಾಯ್ಲೆಟ್ ಕಟ್ಟಿಸಿಕೊಡೋದಲ್ಲ ಸಬಲೀಕರಣ ಅಂದ್ರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂದಿನ ವಿಧಾನ ಸಭಾ ಚುನಾವಣೆಗಾಗಿ ಕಾಂಗ್ರೆಸ್ ಈಗಿಂದಾನೇ ಎಲ್ಲಾ ತಯಾರಿಗಳನ್ನ ಮಾಡಿಕೊಳ್ಳುತ್ತಿದೆ. ಅದೇ ನಿಟ್ಟಿನಲ್ಲಿ ಎಲ್ಲಾ ಕಡೆ ಸಂಚರಿಸಿ, ಜನರ ಸಮಸ್ಯೆ ಕೇಳುವುದರ ಜೊತೆಗೆ ಬಿಜೆಪಿ ಮೇಲೆ ಕಿಡಿಕಾರುತ್ತಿದ್ದಾರೆ. ಇದೀಗ ಪ್ರಿಯಾಂಕಾ ಗಾಂಧಿ ರಾಯ್ ಬರೇಲಿಯಲ್ಲಿ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಮಹಿಳೆಯರು ಸ್ವಾಭಿಮಾನದಿಂದ ಬದುಕಬೇಕು. ಎಲ್ಲಾ ತಾರತಮ್ಯಗಳ ವಿರುದ್ಧ ಹೋರಾಡೋದು ಮಹಿಳಾ ಸಬಲೀಕರಣ. ಅದು ಬಿಟ್ಟು ಎಲ್ಪಿಜಿ ಗ್ಯಾಸ್ ಕೊಡೋದು, ಟಾಯ್ಲೆಟ್ ಕಟ್ಟೋದಲ್ಲ. ಕೇಂದ್ರ ಸರ್ಕಾರ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ಮಹಿಳೆಯರ ಬಲವರ್ಧನೆಗೆ ಮೋದಿ ಸರ್ಕಾರದ ಕೊಡುಗೆ ಏನು ಇಲ್ಲ ಎಂದು ಕಿಡಿಕಾರಿದ್ದಾರೆ.
ಇನ್ನು ಹಿಂದು ಮತ್ತು ಹಿಂದುತ್ವದ ಬಗೆಗಿನ ವ್ಯತ್ಯಾಸದ ಬಗ್ಗೆ ರಾಹುಲ್ ಗಾಂಧಿ ಇತ್ತೀಚೆಗೆ ಮಾತನಾಡಿದ್ರು. ಆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಹಿಂದು ಮತ್ತು ಹಿಂದುತ್ವದ ಬಗ್ಗೆ ಹೇಳಿದ ವಿಚಾರ ಸರಿಯಾಗಿದೆ. ಹಿಂದುತ್ವ ಪ್ರೀತಿ ಮತ್ತು ಏಕತೆಯನ್ನು ಕಲಿಸುತ್ತದೆ. ಆದ್ರೆ ಆರ್ಎಸ್ಎಸ್ ಮತ್ತು ಬಿಜೆಪಿ ಬಲಪಂಥಿಯರಾಗಿದ್ದಾರೆ. ಮುಂದಿನ ಬಾರಿ ನೋಡಿಕೊಂಡು ಮತ ಹಾಕಿ ಎಂದು ಮಹಿಳೆಯರಿಗೆ ಎಚ್ಚರಿಸಿದ್ದಾರೆ.