Omicron Coronavirus India LIVE UPDATES :  ರಾಜ್ಯದಲ್ಲಿಂದು ಮತ್ತೆ 5 ಓಮಿಕ್ರಾನ್ ಪ್ರಕರಣಗಳು ಪತ್ತೆ

 

ಬೆಂಗಳೂರು : ದೇಶಾದ್ಯಂತ  ಓಮಿಕ್ರಾನ್ ಪ್ರಕರಣಗಳು ದಿನದಿಂದ ದಿನಕ್ಕೆ ಕ್ರಮೇಣವಾಗಿ ಹೆಚ್ಚುತ್ತಿವೆ. ಇಂದು (ಸೋಮವಾರ) ದೆಹಲಿಯಲ್ಲಿ ಎರಡು, ಕರ್ನಾಟಕದಲ್ಲಿ ಐದು ಮತ್ತು ಕೇರಳದಲ್ಲಿ ನಾಲ್ಕು ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ದೇಶಾದ್ಯಂತ ಒಮಿಕ್ರಾನ್ ಪ್ರಕರಣಗಳ ಒಟ್ಟು ಸಂಖ್ಯೆ 167 ಕ್ಕೆ ತಲುಪಿದೆ.

ಉಡುಪಿಯಲ್ಲಿ ಎರಡು, ಧಾರವಾಡ, ಭದ್ರಾವತಿ ಮತ್ತು ಮಂಗಳೂರಿನಲ್ಲಿ ತಲಾ ಒಂದು ಓಮಿಕ್ರಾನ್ ಪ್ರಕರಣಗಳಿವೆ. ಸೋಂಕಿತರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ಕೇಂದ್ರಆರೋಗ್ಯ ಸಚಿವಾಲಯ ಅಧಿಕಾರಿಗಳ ಪ್ರಕಾರ, ಓಮಿಕ್ರಾನ್ ಪ್ರಕರಣಗಳಿರುವ ರಾಜ್ಯಗಳು : ಮಹಾರಾಷ್ಟ್ರ (54), ದೆಹಲಿ (24), ರಾಜಸ್ಥಾನ (17), ಕರ್ನಾಟಕ (19), ತೆಲಂಗಾಣ (20), ಗುಜರಾತ್ (11), ಕೇರಳ (15) ಮತ್ತು ಆಂಧ್ರಪ್ರದೇಶ (1), ಚಂಡೀಗಢ (1), ತಮಿಳುನಾಡು (1) ಮತ್ತು ಪಶ್ಚಿಮ ಬಂಗಾಳ (4) ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 6563 ಕರೋನ ವೈರಸ್ ಪ್ರಕರಣಗಳು ಪತ್ತೆಯಾಗಿವೆ. 132 ಸಾವನ್ನಪ್ಪಿದ್ದಾರೆ. 8,077 ಮಂದಿ  ಚೇತರಿಸಿಕೊಂಡಿದ್ದಾರೆ. ಈವರೆಗೂ ಒಟ್ಟು 3,41,87,017 ಜನರು ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ವೈದ್ಯಕೀಯ ಇಲಾಖೆ ತಿಳಿಸಿದೆ. ಭಾರತದಲ್ಲಿ 82,267 ಸಕ್ರಿಯ ಪ್ರಕರಣಗಳಿವೆ. ಇದು ಕಳೆದ 572 ದಿನಗಳಲ್ಲಿ ಅತ್ಯಂತ ಕಡಿಮೆಯಾಗಿದೆ. ದೇಶದಲ್ಲಿ ಇದುವರೆಗೆ 137.67 ಕೋಟಿ ಡೋಸ್ ಲಸಿಕೆಯನ್ನು ನೀಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *