ಶ್ರೀರಂಗಪಟ್ಟಣದಲ್ಲಿ ರಾಜಾವೀರ ಮದಕರಿನಾಯಕ ಸ್ಮಾರಕ ನಿರ್ಮಾಣಕ್ಕೆ ಒತ್ತಾಯ

1 Min Read

ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮೇ. 15 : ನಾಡ ದೊರೆ ರಾಜಾವೀರ ಮದಕರಿನಾಯಕನ 243 ನೇ ಪುಣ್ಯಸ್ಮರಣೆಯನ್ನು ಗುರುವಾರ ನಾಯಕ ಸಮಾಜದಿಂದ ಆಚರಿಸಲಾಯಿತು.

ಮದಕರಿನಾಯಕನ ಪ್ರತಿಮೆಗೆ ಬೃಹದಾಕಾರವಾದ ಹೂಮಾಲೆ ಅರ್ಪಿಸಿ ನಂತರ ರಾಜಾವೀರಮದಕರಿನಾಯಕ ಫೋಟೋಗೆ ಪುಷ್ಪನಮನ ಸಲ್ಲಿಸಿ ಬಳಿಕ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಶ್ರೀರಂಗಪಟ್ಟಣದಲ್ಲಿ ರಾಜಾವೀರ ಮದಕರಿನಾಯಕನ ಸ್ಮಾರಕ ನಿರ್ಮಿಸುವಂತೆ ಒತ್ತಾಯಿಸಿದರು.

ನಾಯಕ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ ಮಾತನಾಡಿ ರಾಜನಹಳ್ಳಿಯಲ್ಲಿ ನಮ್ಮ ಮಠವಿದೆ. ಸ್ವಾಮಿಜಿಗಳು ಹೇಳಿದಂತೆ ನಾವುಗಳು ಕೇಳುತ್ತೇವೆ. ಅಮಿತ್‍ಷಾ ಚಿತ್ರದುರ್ಗಕ್ಕೆ ಬಂದಾಗ ಥೀಮ್ ಪಾರ್ಕ್ ನಿರ್ಮಿಸುವುದಾಗಿ ಭರವಸೆ ನೀಡಿದ್ದರೂ ಇದುವರೆವಿಗೂ ಈಡೇರಿಲ್ಲ. ತಿಮ್ಮಣ್ಣನನಾಯಕ ಕೆರೆ ಸಮೀಪ ತೋಟಗಾರಿಕೆ ಇಲಾಖೆಗೆ ಸೇರಿದ ಸಾಕಷ್ಟು ಜಾಗವಿದೆ. ಅಲ್ಲಿ ಥೀಮ್ ಪಾರ್ಕ್ ನಿರ್ಮಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಕೇಂದ್ರ ಸರ್ಕಾರವನ್ನು ಎಚ್ಚರಿಸಿದರು.

ರಾಜಾಮದಕರಿನಾಯಕ ಮಾತನಾಡಿ ಶ್ರೀರಂಗಪಟ್ಟಣದ ಪಶ್ವಿಮ ವಾಹಿನಿ ತೀರದಲ್ಲಿ ರಾಜಾವೀರ ಮದಕರಿನಾಯಕರ ದೇಹ ದಹನವಾಯಿತು. ಹಾಗಾಗಿ ಅಲ್ಲಿ ಸ್ಮಾರಕವಾಗಬೇಕು. ದಕ್ಷಿಣ ಭಾರತದಲ್ಲಿಯೆ ಅತ್ಯಂತ ಪ್ರಮುಖ ಐತಿಹಾಸಿಕ ಸ್ಥಳವಾಗಿರುವ ಚಿತ್ರದುರ್ಗಕ್ಕೆ ಕೇಂದ್ರ ಗೃಹ ಸಚಿವ ಅಮಿತ್‍ಷಾ ಭೇಟಿ ನೀಡಿದಾಗ ಥೀಂ ಪಾರ್ಕ್ ನಿರ್ಮಿಸುವುದಾಗಿ ಹೇಳಿ ಹೋಗಿದ್ದರು. ಇನ್ನು ಆಗಿಲ್ಲ. ಕೇಂದ್ರ ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ ಎಂದು ಆಗ್ರಹಿಸಿದರು.

ಬಾಲೇನಹಳ್ಳಿ ತಿಪ್ಪೇಸ್ವಾಮಿ, ನಗರಸಭೆ ಸದಸ್ಯ ವೆಂಕಟೇಶ್, ಮಾಜಿ ಸದಸ್ಯ ತಿಪ್ಪೇಸ್ವಾಮಿ, ಜಿಲ್ಲಾ ಕಾಂಗ್ರೆಸ್ ಎಸ್.ಟಿ.ಸೆಲ್ ವಿಭಾಗದ ಅಧ್ಯಕ್ಷ ಮಂಜುನಾಥ್, ರತ್ನಮ್ಮ, ಹೆಚ್.ಅಂಜಿನಪ್ಪ, ಪ್ರಶಾಂತ್ ಕೂಲಿಕಾರ್, ಯುವ ನ್ಯಾಯವಾದಿ ಅಶೋಕ್‍ಬೆಳಗಟ್ಟ, ಓಬಳೇಶ್ ಮುದ್ದಾಪುರ ಹೊಸಹಟ್ಟಿ ಇನ್ನು ಅನೇಕು ಪುಣ್ಯಸ್ಮರಣೆಯಲ್ಲಿ ಪಾಲ್ಗೊಂಡಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *