ಹಿರಿಯೂರು, ಮೇ. 14 : ನಗರದ ಸಿಎಂ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ
ಪಂಚಮುಖಿ ಆಂಜನೇಯ ಸ್ವಾಮಿಯ ವಿಗ್ರಹ ಸ್ಥಾಪನೆಗೆ ನೂತನ ಆಂಜನೇಯನ ವಿಗ್ರಹ ಕೊಡಿಸುವ ಸಂಪೂರ್ಣ ಜವಾಬ್ದಾರಿ ನನ್ನದು ಎಂದು ಸಮಾಜ ಸೇವಕ ಜಿ. ಜಯರಾಮಯ್ಯ ಭರವಸೆ ನೀಡಿದರು.
ಬುಧವಾರ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿನ ಟ್ರಸ್ಟ್ ಪದಾಧಿಕಾರಿಗಳ ಜೊತೆ ಮಾತನಾಡಿದ ಅವರು ದೇವಾಲಯ ಉತ್ತಮವಾಗಿ ನಿರ್ಮಾಣವಾಗುತ್ತಿದೆ. ಪಂಚಮುಖಿ ಆಂಜನೇಯ ದೇವಾಲಯವು ಭಕ್ತರಿಗೆ ಅಪಾರವಾದ ಆಧ್ಯಾತ್ಮಿಕ ಮಹತ್ವನ್ನು ನೀಡುತ್ತದೆ. ಭಗವಾನ್ ಹನುಮಾನ್, ತನ್ನ ಪಂಚಮುಖಿ (ಐದು ಮುಖದ) ರೂಪದಲ್ಲಿ ವಿವಿಧ ದೈವಿಕ ಗುಣಗಳು ಮತ್ತು ಗುಣಲಕ್ಷಣಗಳ ಸಾಕಾರವನ್ನು ಪ್ರತಿನಿಧಿಸುತ್ತಾನೆ. ಪ್ರತಿಯೊಂದು ಮುಖಕ್ಕೂ ವಿಶಿಷ್ಟವಾದ ಮಹತ್ವವಿದೆ ಎಂದು ತಿಳಿಸಿದರು. ಹನುಮಾನ್ ಮುಖ, ನರಸಿಂಹ ಮುಖ, ಗರುಡ ಮುಖ, ವರಹ ಮುಖ ಹಾಗೂ ಹಯಗ್ರೀವ ಮುಖ ಈಗೆ ಐದು ಮುಖಗಳನ್ನು ಆಂಜನೇಯ ಹೊಂದಿದ್ದಾನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಚಿತ್ರ ಜಿತ್ ಯಾದವ್, ದೇವಾಲಯ ಟ್ರಸ್ಟ್ ಅಧ್ಯಕ್ಷ ಬಸಂತ್ ಕುಮಾರ್, ಆಲಮರದಹಟ್ಟಿ ಶಿವಣ್ಣ, ಮಹೇಂದ್ರ, ಭರತ್ ಮದ್ದನಕುಂಟೆ, ಶ್ರೀನಿವಾಸ್, ತಿಮ್ಮಣ್ಣ, ಪ್ರಹ್ಲಾದ್, ಶಿವಣ್ಣ, ನಾಗರಾಜ್, ದೀಪು, ರಮೇಶ್, ದೇವಾಲಯ ಅರ್ಚಕರು ಹಾಗೂ ಪದಾಧಿಕಾರಿಗಳು ಇದ್ದರು.






