ಹಿರಿಯೂರು : ಬಸವರಾಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ 100% ಫಲಿತಾಂಶ

1 Min Read

ಸುದ್ದಿಒನ್, ಹಿರಿಯೂರು, ಮೇ. 13  : ನಗರದ ಹೊರವಲಯದಲ್ಲಿರುವ ಶ್ರೀ ಬಸವರಾಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇಕಡಾ ನೂರರಷ್ಟು ಫಲಿತಾಂಶ ಲಭಿಸಿದೆ.

ಮೇ 13ರಂದು ಪ್ರಕಟಗೊಂಡಿರುವ ಸಿಬಿಎಸ್.ಸಿಯ ಹತ್ತನೇ ತರಗತಿ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದೆ. ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಆರ್. ಕೃತಿಕಾ 91.2% ಶಾಲೆಗೆ ಮೊದಲ ಸ್ಥಾನ ಪಡೆದಿದ್ದಾರೆ. ಉಳಿದಂತೆ ಎಂ. ಯಶಸ್ ಗೌಡ 90%, ವಿ. ಪ್ರೀತಿ 88%, ಶೇಕ್ ಮೊಹಮ್ಮದ್ 88%, ಪಿಎಸ್. ಮೇಘನಾ 85%, ಫಲಿತಾಂಶದ ಮೂಲಕ ಶಾಲೆಗೆ ಉತ್ತಮ ಹೆಸರುಗಳಿಸಿದ್ದಾರೆ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಬಸವರಾಜ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿಎಸ್. ಸಚಿನ್ ಗೌಡ, ಶಾಲೆಯ ಪ್ರಾಂಶುಪಾಲರಾದ ಡಿ. ರಮಿತ ಸೇರಿದಂತೆ ಶಾಲೆಯ ಸಿಬ್ಬಂದಿಗಳು ಮತ್ತು ಪೋಷಕರು ಅಭಿನಂದಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *