ಸೈನಿಕರಿಗಾಗಿ ಎಲ್ಲಾ ಮಸೀದಿಯಲ್ಲಿ ಪೂಜೆ ; ಜಮೀರ್ ಖಾನ್

suddionenews
1 Min Read

ಬೆಂಗಳೂರು; ದೇಶದಾದ್ಯಂತ ಪಾಕಿಸ್ತಾನಿಯರ ವಿರುದ್ಧ ಘೋಷಣೆ ಮೊಳಗುತ್ತಿದೆ. ಹಿಂದೂಗಳನ್ನ ಹುಡುಕಿ ಕೊಂದವರಿಗೆ ತಕ್ಕ ಶಾಸ್ತಿಯಾಗಿದೆ. ಉಗ್ರರ ಅಡಗುತಾಣಗಳನ್ನು ಹುಡುಕಿ ಹುಡುಕಿ ನೆಲಸಮ ಮಾಡಲಾಗುತ್ತಿದೆ. ಈಗಾಗಲೇ ನೂರಾರು ಉಗ್ರರು ಸತ್ತು ಮಣ್ಣಾಗಿದ್ದಾರೆ. ಇನ್ನು ಕೂಡ ಪಾಕಿಸ್ತಾನದ ಮೇಲೆ ಆಕ್ರೋಶ ಅಲೆ ಬಡಿಯುತ್ತಲೆ ಇದೆ. ಈಗಲೂ ಪಾಕಿಸ್ತಾನದ ಮೇಲೆ ದಾಳಿಯಾಗುತ್ತಿದೆ. ಇದರ‌ ನಡುವೆ ಕಾಂಗ್ರೆಸ್ ನಾಯಕರು ತಿರಂಗ ಯಾತ್ರೆಯನ್ನು ನಡೆಸಿದ್ದಾರೆ. ಪಾಕಿಸ್ತಾನಕ್ಕೆ ಸೂಸೈಡ್ ಬಾಂಬ್ ಕಟ್ಟಿಕೊಂಡು ಹೋಗುತ್ತೇನೆ ಎಂದಿದ್ದ ಜಮೀರ್ ಅಹ್ಮದ್ ಖಾನ್ ಅವರು ಮತ್ತೆ ಅದನ್ನೇ ಉಚ್ಛರಿಸಿದ್ದಾರೆ. ಅಷ್ಟೇ ಅಲ್ಲ ಎಲ್ಲಾ ಮಸೀದಿಗಳಲ್ಲಿ ಯೋಧರಿಗಾಗಿ ವಿಶೇಷ ಪೂಜೆ ಸಲ್ಲಿಸುತ್ತೇವೆ ಎಂದಿದ್ದಾರೆ.

ಈ ಬಗ್ಗೆ ಮಾತನಾಡಿದ ಜಮೀರ್ ಅಹ್ಮದ್ ಖಾನ್ ಅವರು, ಇಂದು ಎಲ್ಲಾ ಮಸೀದಿಯಲ್ಲಿ ಇವತ್ತು ಪ್ರಾರ್ಥನೆಯನ್ನ ಮಾಡುವುದಕ್ಕೆ ಹೇಳಿದ್ದೀನಿ. ಗಾಂಧಿನಗರದ ಮಸೀದಿಯಲ್ಲಿ ನಾನು ಕೂಡ ಪ್ರಾರ್ಥನೆ ಮಾಡುವುದಕ್ಕೆ ಹೋಗ್ತೇನೆ. ಇಡೀ ದೇಶದಲ್ಲಿ ಇವತ್ತು ಎಲ್ಲಾ ಮಸೀದಿಯಲ್ಲಿ ಪ್ರಾರ್ಥನೆಯನ್ನು ಮಾಡ್ತಾರೆ.

ಬಿಜೆಪಿಯವರಿಗೆ ಟೀಕೆ ಬಿಟ್ಟರೆ ಬೇರೆ ಏನಾದ್ರೂ ಇದ್ಯಾ. ನಾನು ದೇಶಕ್ಕೋಸ್ಕರ ಈಗಲೂ ಬಲಿಯಾಗುವುದಕ್ಕೆ ಸಿದ್ಧ. ಸೂಸೈಡ್ ಬಾಂಬ್ ಕೊಟ್ರೆ ನಾನು ಈಗಲೂ ಅಲ್ಲಿಗೆ ಹೋಗುವುದಕ್ಕೆ ಸಿದ್ಧ. ದೇಶಕ್ಕೋಸ್ಕರ ಏನು ಬೇಕಾದರೂ ಮಾಡುವುದಕ್ಕೂ ಸಿದ್ಧವಾಗಿದ್ದೇನೆ. ಇದು ನಮ್ಮ ದೇಶ. ನಾನು ಹೋಗ್ತೀನಿ ಅಂತ ಅಲ್ಲ. ಪ್ರಧಾನ ಮಂತ್ರಿಗಳು ಕೊಟ್ಟರೆ, ನನ್ನ ಅಗತ್ಯವಿದ್ದು ನನ್ನನ್ನ ಕಳುಹಿಸಿಕೊಟ್ಟರೆ ಹೋಗ್ತೇನೆ ಅಂತ ಹೇಳಿದ್ದು. ನಾವೂ ನಮ್ಮ ಸೈನಿಕರಿಗೆ ಶುಭಾಶಷಯಗಳನ್ನ ಕೋರುತ್ತೇನೆ ಎಂದಿದ್ದಾರೆ‌. ಮೋದಿ ಅವರು ಅನುಮತಿ ಕೊಟ್ಟರೆ ಈಗಲೇ ಬಾಂಬ್ ಕಟ್ಟಿಕೊಂಡು ಹೋಗುತ್ತೇನೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks