Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಕೊನೆಗೂ ಮಣಿದ ಸೋನು ನಿಗಮ್ ; Sorry Karnataka ಎಂದು ಪೋಸ್ಟ್..!

---Advertisement---

ಕನ್ನಡಿಗರು ಹೇಳಿ ಕೇಳಿ ವಿಶಾಲ ಹೃದಯದವರು. ಎಲ್ಲರಿಗೂ ಬಂದು ನೆಲೆಸಲು ಅವಕಾಶ ನೀಡುತ್ತಾರೆ. ಯಾವುದೇ ಭಾಷೆಯವರಾದರೂ ಬದುಕು ಕಟ್ಟಿಕೊಳ್ಳಲು ಸಹಕರಿಸುತ್ತಾರೆ. ಆದರೆ ಗಾಂಚಾಲಿ ಮಾಡಿದ್ರೆ ತಲೆ ಬಾಗುವ ತನಕ ಬಿಡೋದೆ ಇಲ್ಲ. ಇದೀಗ ಸೋನು ನಿಗಮ್ ವಿಚಾರದಲ್ಲು ಅದೇ ಆಗಿದ್ದು. ಬೆಂಗಳೂರಿಗೆ ಬಂದು ಕನ್ನಡಿಗರನ್ನ ಕೆಣಕಿ ಹೋಗಿದ್ದರು. ಅದರಲ್ಲೂ ಇಡೀ ದೇಶ ದ್ವೇಷಿಸ್ತಾ ಇರೋ ಪೆಹಲ್ಗಾಮ್ ದಾಳಿಗೆ ಹೋಲಿಕೆ ಮಾಡಿದ್ದೆ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿತ್ತು.

ಕರ್ನಾಟಕದಲ್ಲಿ ಸೋನು ನಿಗಮ್ ವಿರುದ್ಧ ಎಲ್ಲರೂ ಧ್ವನಿ ಎತ್ತಿದ್ದರು. ನಮ್ಮ ಕನ್ನಡದಲ್ಲಿ ಇನ್ಮುಂದೆ ಸೋನು ನಿಗಮ್ ಹಾಡುವಂತೆ ಇಲ್ಲ ಎಂಬ ನಿರ್ಧಾರಕ್ಕೆ ಬಂದರು. ಇಷ್ಟೆಲ್ಲ ಆದ್ರೂ ಕೂಡ ಸೋನು ನಿಗಮ್ ಕ್ಷಮೆ ಕೇಳುವ ಉಸಾಬರಿಗೆ ಹೋಗಲಿಲ್ಲ. ಮತ್ತದೇ ಮೊಂಡುತನದ ಪರಮಾವಧಿ. ಸರಿ ಯಾವುದು, ತಪ್ಪು ಯಾವುದು ಎಂಬುದನ್ನ ಕನ್ನಡಿಗರಿಗೆ ಬಿಡ್ತೀನಿ ಅಂದ್ರು‌. ಜೊತೆಗೆ ನನಗೆ ವಯಸ್ಸು 51 ಅವಮಾನ ಸಹಿಸುವ ವಯಸ್ಸಲ್ಲ ಅಂತ ಅಂದು ಆಗಿದ್ದೇನು ಎಂಬುದರ ಬಗ್ಗೆ ಕ್ಲಾರಿಟಿ ಕೊಟ್ರು. ಇದ್ಯಾವುದಕ್ಕೂ ಕನ್ನಡಿಗರು ಬಗ್ಗದೆ ಹೋದಾಗ, ಕಡೆಗೂ ಸ್ಟಾರ್ ಗಾಯಕ ಮಣಿದಿದ್ದಾರೆ. ಕನ್ನಡಿಗರ ಕ್ಷಮೆ ಯಾಚಿಸಿದ್ದಾರೆ.

ಕ್ಷಮಿಸಿ ಬಿಡು ಕರ್ನಾಟಕ. ನಿಮ್ಮ ಪ್ರೀತಿಗಿಂತ ನನ್ನ ಅಹಂ ದೊಡ್ಡದೇನು ಅಲ್ಲ. ಸದಾ ಕರ್ನಾಟಕ, ಕನ್ನಡಿಗರನ್ನ ಪ್ರೀತಿಸುತ್ತೇನೆ ಎಂದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಕರ್ನಾಟಕ ಜನತೆ ಎಕ್ಸ್ ಕ್ಯೂಸ್ ಕೊಡಬಹುದೇನೋ. ಆದರೆ ಅಂತ ಕೆಟ್ಟ ಕೃತ್ಯಕ್ಕೆ ಹೋಲಿಕೆ ಮಾಡಿದ ಸೋನು ನಿಗಮ್ ಅವರನ್ನ ಕ್ಷಮಿಸುವುದು ಸುಲಭವಲ್ಲದ ಮಾತು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...