ಸೋನು ನಿಗಮ್ ಕಾರ್ಯಕ್ರಮವೊಂದರಲ್ಲಿ ಆಡಿದ ಮಾತುಗಳು ಕನ್ನಡಿಗರನ್ನ ಕೆರಳಿಸಿದೆ. ಸೋನು ನಿಗಮ್ ಯಾವುದೇ ಕಾರಣಕ್ಕೂ ಇನ್ಮುಂದೆ ಕರ್ನಾಟಕದಲ್ಲಿ ಹಾಡುವಂತೆ ಇಲ್ಲ ಎನ್ನುತ್ತಿದ್ದಾರೆ. ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸೋನು ನಿಗಮ್ ಮತ್ತೊಮ್ಮೆ ಕನ್ನಡಿಗರನ್ನ ಕೆಣಕಿದ್ದರು. ಕನ್ನಡ.. ಕನ್ನಡ.. ಕನ್ನಡ ಅಂತ ವ್ಯಂಗ್ಯವಾಡುವಂತೆ ಹೇಳಿದ್ದರು. ಇಂದು ಬೆಂಗಳೂರಿನಲ್ಲಿ ಮತ್ತೆ ಆಕ್ರೋಶ ಭುಗಿಲೆದ್ದಿದೆ. ಕನ್ನಡ ಪರ ಸಂಘಟನೆಗಳು ಸೋನು ನಿಗಮ್ ವಿರುದ್ಧ ಕೆಂಡಕಾರಿದ್ದಾರೆ. ನಮ್ಮ ಕನ್ನಡ ಚಿತ್ರರಂಗಕ್ಕೆ ಮತ್ತೆ ಅವರಿಂದ ಹಾಡು ಹಾಡಿಸ ಬಾರದು. ಎನ್ನುತ್ತಿದ್ದಾರೆ. ಇದರ ನಡುವೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರು ಕೂಡ ಸೋನು ನಿಗಮ್ ಅವರನ್ನ ದೂರ ಇಡುವ ನಿರ್ಧಾರ ಮಾಡಿದ್ದಾರೆ.
ಈ ನಿರ್ಧಾರವನ್ನ ಸೋನು ನಿಗಮ್ ಸ್ವೀಕಾರ ಮಾಡಿದ್ದಾರೆ. ಈ ಸಂಬಂಧ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಕೂಡ ಹಾಕಿದ್ದಾರೆ. ನಿರ್ಬಂಧದ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಯಾವುದು ಸರಿ, ಯಾವುದು ತಪ್ಪು ಎನ್ನುವ ಲೆಕ್ಕಚಾರವನ್ನು ಕನ್ನಡಿಗರಿಗೆ ಬಿಡುತ್ತೇನೆ. ಭಾಷೆ, ಸಂಸ್ಕೃತಿ, ಸಂಗೀತ, ಸಂಗೀತಗಾರರು ಹಾಗೂ ಈ ರಾಜ್ಯ ಮತ್ತು ಜನರ ಮೇಲೆ ಪ್ರೀತಿ ಹೊಂದಿದ್ದೇನೆ. ಆ ಪ್ರೀತಿ ಕರ್ನಾಟಕದಲ್ಲಿದ್ದಾಗ ಮಾತ್ರವಲ್ಲ, ಜಗತ್ತಿನಲ್ಲಿ ಎಲ್ಲಿಯೇ ಇದ್ದರು ಸಹ ಕನ್ನಡ ಹಾಡನ್ನು ಹಿಂದಿ ಸೇರಿ ಇತರ ಭಾಷೆಗಳಿಗಿಂತ ಹೆಚ್ಚು ಗೌರವದಿಂದ ನೋಡಿದ್ದೇನೆ. ಕರ್ನಾಟಕದ ಪ್ರತಿ ಕಾರ್ಯಕ್ರಮದಲ್ಲೂ ಒಂದು ಗಂಟೆಗಿಂತ ಹೆಚ್ಚು ಕನ್ನಡ ಹಾಡುಗಳೊಂದಿಗೆ ಸಿದ್ಧವಾಗಿ ಬಂದಿರುತ್ತೇನೆ.

ನಾನಿನ್ನು ಬಾಲಕನಲ್ಲ, ಅವಮಾನವನ್ನು ಸಹಿಸುವ ವಯಸ್ಸು ನನಗಿಲ್ಲ. ನನಗೀಗ 51 ವರ್ಷ. ಜೀವನದ ಎರಡನೇ ಹೆಜ್ಜೆ ಇಟ್ಡಿದ್ದೇನೆ. ನನ್ನ ಮಗನಷ್ಟು ವಯಸ್ಸಿನ ಹುಡುಗ ಸಾವಿರಾರು ಜನರ ಮುಂದೆ ಬೆದರಿಸಲು ಪ್ರಯತ್ನಿಸಿದಾಗ ನನ್ನ ಮನಸ್ಸಿಗೆ ಬೇಸರ ತರಿಸಿದ್ದು ನಿಜ. ನಾನು ಸಮಾಧಾನದಿಂದಾನೇ ಹೇಳಿದೆ. ಈಗಷ್ಟೇ ಕಾರ್ಯಕ್ರಮ ಶುರುವಾಗಿದೆ. ನಿಮಗೆ ನಿರಾದೆ ಮಾಡುವುದಿಲ್ಲ ಎಂದು ಹೇಳಿದೆ. ಪೆಹಲ್ಗಾಮ್ ನಲ್ಲಿ ನಡೆದ ಘಟನೆಗಳನ್ನು ನೋಡಿದಾಗ ಅವರಿಗೆ ಬುದ್ಧಿ ಹೇಳಬೇಕಾಯ್ತು ಎಂದು ಇನ್ನಷ್ಟು ವಿಚಾರಗಳನ್ನು ಬರೆದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















