ಸುದ್ದಿಒನ್, ಚಿತ್ರದುರ್ಗ, ಮೇ. 03 : ನಗರದ ಪ್ರತಿಷ್ಠಿತ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ, ವಿದ್ಯಾರ್ಥಿಯಾದ ಕಲ್ಯಾಣ ಬಾಬು ಇವರು 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಕ್ಕೆ 622 ಅಂಕಗಳನ್ನು ಪಡೆದು ರಾಜ್ಯಕ್ಕೆ 4ನೇ ರ್ಯಾಂಕ್ ಪಡೆದಿದ್ದಾರೆ.
ಇಂದು.ಕೆ 621 ಅಂಕ, ಆಸೇಚನ ಪಿ ದಾಸರಿ, ಕಾವ್ಯಶ್ರೀ ಸಿ ಜೆ, ಕೀರ್ತನಾ ಎಂ ಜಿ 625ಕ್ಕೆ 620 ಅಂಕಗಳನ್ನು ಗಳಿಸಿರುತ್ತಾರೆ.
ಒಟ್ಟು 147 ವಿದ್ಯಾರ್ಥಿಗಳಲ್ಲಿ 90 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 45 ವಿದ್ಯಾರ್ಥಿಗಳು ಪ್ರಥಮ ದರ್ಜೆ, 06 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು ಪ್ರಥಮ ಭಾಷೆ ಕನ್ನಡದಲ್ಲಿ 08 ವಿದ್ಯಾರ್ಥಿಗಳು 125ಕ್ಕೆ 125 ಅಂಕ, ದ್ವಿತೀಯ ಭಾಷೆ ಇಂಗ್ಲೀಷ್ನಲ್ಲಿ 09, ತೃತೀಯ ಭಾಷೆ ಹಿಂದಿಯಲ್ಲಿ 14, ಗಣಿತ ವಿಷಯದಲ್ಲಿ 08, ವಿಜ್ಞಾನ ವಿಷಯದಲ್ಲಿ 09 ಹಾಗೂ ಸಮಾಜ ವಿಜ್ಞಾನ ವಿಷಯದಲ್ಲಿ 13 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ.
625ಕ್ಕೆ 622 ಅಂಕಗಳನ್ನು ಗಳಿಸಿ ರಾಜ್ಯ 4ನೇ ರ್ಯಾಂಕ್ ಪಡೆದಿರುವ ಈ ವಿದ್ಯಾರ್ಥಿಗೆ ಶಾಲಾ ಆಡಳಿತ ಮಂಡಳಿ ಹಾಗು ಶಿಕ್ಷಕ ವೃಂದದವರು ಅಭಿನಂದಿಸಿರುತ್ತಾರೆ.


