ಚಳ್ಳಕೆರೆ : ವೇದಾ ಶಾಲೆಗೆ ಉತ್ತಮ ಫಲಿತಾಂಶ..!

1 Min Read

ಸುದ್ದಿಒನ್,ಚಳ್ಳಕೆರೆ, ಮೇ. 02 : ತಾಲೂಕಿನ ಸಾಣಿಕೆರೆಯ ವೇದಾ ಶಾಲೆಯ ವಿದ್ಯಾರ್ಥಿಗಳು SSLC ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದೊಂದಿಗೆ ಒಂದು ಪ್ರತಿಷ್ಠಿತ ಸಂಸ್ಥೆಯಾಗಿ ಗುಣಮಟ್ಟದ ಶಿಕ್ಷಣಕ್ಕೆ ಒಮ್ಮೆ ತಿರುಗಿ ನೋಡುವಂತೆ ಸಾಧನೆ ಮಾಡಿದೆ.

2024-25ನೇ ಸಾಲಿನ SSLC ಪರೀಕ್ಷೆಗೆ ಒಟ್ಟು 69 ವಿದ್ಯಾರ್ಥಿಗಳು ಹಾಜರಾಗಿದ್ದು, ಇದರಲ್ಲಿ 20 ವಿದ್ಯಾರ್ಥಿಗಳು Distinction , 39 ವಿದ್ಯಾರ್ಥಿಗಳು ಪ್ರಥಮ ದರ್ಜೆ, 06 ಆರು ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುವ ಮೂಲಕ
ಸಂಜಯ.ವಿ.-606 ,
ಕೀರ್ತಿ-604 ಹಾಗೂ
ಕೀರ್ತನ್ ಎಂ ಪಿ-600 ಅಂಕಗಳನ್ನು ಗಳಿಸುವುದರೊಂದಿಗೆ ಅತ್ಯುತ್ತಮ ಸಾಧನೆಯನ್ನು ತೋರಿದ್ದಾರೆ.

ಉತ್ತಮ ಸಾಧನೆಯನ್ನು ತೋರಿದ ವಿದ್ಯಾರ್ಥಿಗಳಿಗೆ ಹಾಗೂ ಶ್ರಮಿಸಿದಂತಹ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರಿಗೆ ಸಂಸ್ಥೆಯ ಅಧ್ಯಕ್ಷರಾದ ಡಿ ಟಿ ರವೀಂದ್ರರವರು ಹೃದಯಪೂರ್ವಕವಾಗಿ ಅಭಿನಂದಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks