ಆರ್ಯವೈಶ್ಯ ಸಮುದಾಯ ದಾನಶೀಲತೆಗೆ ಹೆಸರುವಾಸಿ : ಶ್ರೀನಿವಾಸ

2 Min Read

ಸುದ್ದಿಒನ್, ಚಿತ್ರದುರ್ಗ, ಮೇ. 02 : ಆರ್ಯವೈಶ್ಯ ಸಮುದಾಯ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಸದಾ ನೆರವು ನೀಡುತ್ತಿದ್ದು ದಾನಶೀಲತೆಗೆ ಹೆಸರಾಗಿದೆ ಎಂದು ಆರ್ಯವೈಶ್ಯ ಸಂಘದ ಅಧ್ಯಕ್ಷರಾದ ಎಲ್.ಇ. ಶ್ರೀನಿವಾಸ ಬಾಬುರವರು ತಿಳಿಸಿದರು.

ನಗರದ ಆರ್ಯವೈಶ್ಯ ಸಂಘ ಹಾಗೂ ಸಹ ಸಂಸ್ಥೆಗಳ ಸಹಯೋಗದಲ್ಲಿ ದಿನಾಂಕ 1-5-2025 ರಿಂದ 7-5-2025ರವರೆಗೆ ನಡೆಯುವ “ವಾಸವಿ ಜಯಂತಿ ಸಪ್ತೋತ್ಸವ” ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ ಆರ್ಯವೈಶ್ಯರ ಧಾರ್ಮಿಕ ಅಸ್ಮಿತೆಯೆನಿಸಿರುವ ಶ್ರೀ ಕನ್ಯಕಾಪರಮೇಶ್ವರಿ ಜಯಂತಿಯನ್ನು ಈ ಬಾರಿ ವಿಶೇಷವಾಗಿ ಸಾಂಸ್ಕøತಿಕ ಹಾಗೂ ಧಾರ್ಮಿಕ ಸಪ್ತೋತ್ಸವವಾಗಿ ಆಚರಿಸಲಿರುವುದಾಗಿ ಹೇಳಿದರು.

ಆರ್ಯವೈಶ್ಯ ಸಂಘದ ನಿರ್ದೇಶಕ ಮಂಡಳಿಯ ಸದಸ್ಯರೆಲ್ಲರು ಒಟ್ಟು ಗೂಡಿ, ಗಿಡಕ್ಕೆ ನೀರೆರೆಯುವ ಮೂಲಕ ಏಳು ದಿನಗಳ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಸರ್ವದಾ ಸುರೇಶಗುಪ್ತ ಮತ್ತು ಲಕ್ಷ್ಮಿ ಯವರ ಪ್ರಾರ್ಥನೆ, ಎನ್. ಶಶಿಧರಗುಪ್ತ ಸ್ವಾಗತಿಸಿ, ಎಂ.ಆರ್. ನಟರಾಜ್‍ರವರು ವಂದನಾರ್ಪಣೆ, ಹಾಗೂ ಟಿ.ವಿ. ಸುರೇಶಗುಪ್ತ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.

ಇಂದು ವಾಸವಿ ವಿದ್ಯಾ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಭರತನಾಟ್ಯ, ವಿವಿಧ ಶಕ್ತಿ ದೇವತೆಗಳ ಸಂಕೇತಿಸುವ ನೃತ್ಯ, ಪ್ರಹಸನ, ಮೊದಲಾದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಸಾದರಪಡಿಸುವ ಮೂಲಕ ಕಾರ್ಯಕ್ರಮ ಕಳೆಗಟ್ಟಿಸಿದರು. ಉಡುಪಿ ಶ್ರೀ ಕೃಷ್ಣಚಾರ್ಯ ಜೋಷಿ, ಗುರು ರಾಘವೇಂದ್ರ ಮಠ ಮಂತ್ರಾಲಯ ಇವರಿಂದ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಭಾಗವತ ಪ್ರವಚನ ಏರ್ಪಡಿಸಲಾಗಿತ್ತು. ಅವರು ತಮ್ಮ ಮಾತುಗಳಲ್ಲಿ ಬದುಕಿಗಾಗಿ ಹಣಬೇಕೇ ಹೊರತು ಹಣವೇ ಬದುಕಲ್ಲವೆಂದು ಹೇಳುತ್ತಾ ವಿವಿಧ ಪ್ರಾಣಿ ಪಕ್ಷಿಗಳು ಹೊಟ್ಟೆ ಪಾಡಿಗಾಗಿ ಯಾವುದೇ ಶಾಶ್ವತ ವ್ಯವಸ್ಥೆ ಮಾಡಿಕೊಳ್ಳುವುದಿಲ್ಲ ಆದರೆ ಅತ್ಯಾಸೆಗೆ ಬಲಿಯಾದ ಮನುಷ್ಯರು ಮಾತ್ರ ಹೆಚ್ಚು ಹೆಚ್ಚಾಗಿ ಸಂಗ್ರಹಣೆ ಮಾಡುತ್ತಾರೆ. ಉತ್ತಮ ಮನಸ್ಸಿಗೆ ಉದಾಹರಣೆ ಗಜೇಂದ್ರ ಮೋಕ್ಷ, ಇಂದ್ರದ್ಯುಮ್ನ ಶ್ರವಣ ಕುಮಾರ ಮೊದಲಾದವರ ವೃತ್ತಾಂತವನ್ನು ವಿವರಿಸಿ, ಲೌಕಿಕ ತತ್ವಗಳನ್ನು ವಿವರಿಸಿದರು. ವಾಸವಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಸತ್ಯನಾರಾಯಣ ಶೆಟ್ಟಿಯವರು ಪ್ರವಚನಕಾರರನ್ನು ಪರಿಚಯಿಸಿದರು. ಸಭಾ ಕಾರ್ಯಕ್ರಮದ ನಂತರ ಶ್ರೀ ಕನ್ಯಕಾಪರಮೇಶ್ವರಿ ದೇಗುಲದಲ್ಲಿ ಮಹಾ ಮಂಗಳಾರತಿಯ ನಂತರ ಸಪ್ತಾಹದ ಮೊದಲ ದಿನದ ಕಾರ್ಯಕ್ರಮ ಸಂಪನ್ನಗೊಂಡವು.

ವರದಿ :
-ಪ್ರೊ. ಟಿ.ವಿ. ಸುರೇಶಗುಪ್ತ
ಪಿ.ಆರ್.ಓ. ಆರ್ಯವೈಶ್ಯ ಸಂಘ
ಚಿತ್ರದುರ್ಗ. ಮೊ : 9945461834

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks