ಬೆಂಗಳೂರು: ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಒಟ್ಟು 303 ಜನರಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ.
ಇನ್ನು ಕಳೆದ 24 ಗಂಟೆಯಲ್ಲಿ 20743 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್, 108668 RTPCR ಟೆಸ್ಟ್ ಸೇರಿದಂತೆ ಒಟ್ಟು 129411 ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ. ಅದರಲ್ಲಿ 303 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. 197 ಮಂದಿ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ.
ಉಳಿದಂತೆ ಮಂದಿ ಕಳೆದ 24 ಗಂಟೆಯಲ್ಲಿ ಆಸ್ಪತ್ರೆಯಿಂದ 322 ಮಂದಿ ಡಿಸ್ಚಾರ್ಜ್ ಆಗಿ ಮಂದಿ ಮನೆಗೆ ತೆರಳಿದ್ದಾರೆ. ಇನ್ನು ಕೊರೊನಾವನ್ನು ಜಯಿಸಲಾಗದೆ 2 ಮಂದಿ ಸಾವನ್ನಪ್ಪಿದ್ದಾರೆ.