ಬೆಂಗಳೂರು: ಕಾಲೇಜುಗಳಲ್ಲಿ ಕನ್ನಡ ಕಡ್ಡಾಯ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಇಂದು ವಿಚಾರಣೆ ನಡೆಸಿದೆ. ಈ ವೇಳೆ ಎಲ್ಲರಿಗೂ ಕನ್ನಡವನ್ನ ಕಡ್ಡಾಯವಾಗಿ ಕಲಿಯಬೇಕು ಅಂತ ಹೇಳುವಾಗಿಲ್ಲ ಎಂದಿದೆ.
ಕನ್ನಡ ಕಲಿಯುವವರು ಕಲಿಯಲಿ. ಕನ್ನಡ ಕಲಿಯಲು ಬಯಸದ ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯಗೊಳಿಸುವುದು ಬೇಡ ಎಂದಿದೆ. ಇನ್ನು ಮುಂದಿನ ಆದೇಶದವರೆಗೂ ಕನ್ನಡ ಕಡ್ಡಾಯಗೊಳಿಸಬಾರದು ಎಂಬ ಸೂಚನೆಯನ್ನು ನೀಡಿದೆ.
ಇದಕ್ಕೆ ಉತ್ತರಿಸಿರುವ ಕೇಂದ್ರ ಸರ್ಕಾರದ ಎಎಸ್ ನರಗುನಮದ್ ಭಾಷೆಯ ವಿಚಾರ ತುಂಬಾ ಗಂಭೀರವಾದ ವಿಚಾರ. ಗಂಭೀರ ಪರಿಣಾಮ ಬೀರುವುದರಿಂದ ಕೇಂದ್ರ ಸರ್ಕಾರ ರಾಜ್ಯಗಳ ಜೊತೆ ಸಮಾಲೋಚನೆ ನಡೆಸಿ, ಈ ಬಗ್ಗೆ ಕೋರ್ಟ್ ಗೆ ತಿಳಿಸಲಾಗುವುದು ಎಂದಿದ್ದಾರೆ.