ಚಿತ್ರದುರ್ಗ, (ಡಿ.15): ಖಾಸಗೀಕರಣ ವಿರೋಧಿಸಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಎಂಪ್ಲಾಯ್ಸಿ ಅಸೋಸಿಯೇಷನ್ ವತಿಯಿಂದ ಡಿ.16 ಮತ್ತು 17 ರಂದು ನಡೆಯುವ ಬ್ಯಾಂಕ್ ಮುಷ್ಕರದಲ್ಲಿ ಸಂಘಟನೆಯ ಎಲ್ಲಾ ನೌಕರರು ಬೆಂಬಲ ವ್ಯಕ್ತಪಡಿಸಬೇಕಾಗಿರುವುದರಿಂದ ಪ್ರಾದೇಶಿಕ ಕಚೇರಿ ಆವರಣ ಅಥವಾ ಮುಖಂಡರು ನಿಗಧಿಪಡಿಸಿರುವ ಸ್ಥಳದಲ್ಲಿ ನಿಗಧಿತ ಸಮಯಕ್ಕೆ ಹಾಜರಾಗಿ ಒಗ್ಗಟ್ಟು ಪ್ರದರ್ಶಿಸಿ ಮುಷ್ಕರ ಯಶಸ್ವಿಗೊಳಿಸುವಂತೆ ಕಾರ್ಯದರ್ಶಿ ಎನ್.ಜಿ.ನಾರಾಯಣ್, ಸಹಾಯಕ ಕಾರ್ಯದರ್ಶಿ ಹರೀಶ್‍ಬಾಬುರೆಡ್ಡಿ, ಕಾರ್ಯಾಧ್ಯಕ್ಷ ಲೋಕೇಶ್ ಬಿ.ಆರ್. ಇವರುಗಳು ಬ್ಯಾಂಕ್ ನೌಕರರಲ್ಲಿ ಹಾಗೂ ಸದಸ್ಯರುಗಳಲ್ಲಿ ಮನವಿ ಮಾಡಿದ್ದಾರೆ.


