Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

UPSC-2025ರ ಫಲಿತಾಂಶ ಪ್ರಕಟ ; ಶಕ್ತಿ ದುಬೇ ಪ್ರಥಮ ಸ್ಥಾನ

---Advertisement---

ನವದೆಹಲಿ; ಇಂದು ಕೇಂದ್ರ ಲೋಕಸೇವಾ ಆಯೋಗದ ಟಾಪರ್ ಪಟ್ಟಿ ಬಿಡುಗಡೆಯಾಗಿದೆ. ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಶಕ್ತಿ ದುಬೆ ಟಾಪರ್ ಆಗಿದ್ದಾರೆ. ಹರ್ಷಿತಾ ಗೋಯೆಲ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ಅದರಲ್ಲಿ 1,009 ಅಭ್ಯರ್ಥಿಗಳು ಈ ಬಾರಿ ಲೋಕಸೇವಾ ಆಯೋಗಕ್ಕೆ ಆಯ್ಕೆಯಾಗಿದ್ದಾರೆ.

ಶಕ್ತಿ ದುಬೇ ಮೂಲತಃ ಪ್ರಯಾಗ್ ರಾಜ್ ನವರಾಗಿದ್ದಾರೆ. UPSC ಪರೀಕ್ಷೆ ಹಾಗೂ ಸಂದರ್ಶನದಲ್ಲಿ ಆಯ್ಕೆಯಾದ ಈ 1,009 ಮಂದಿಯೂ ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ, ಭಾರತೀಯ ಪೊಲೀಸ್ ಸೇವೆ ಮತ್ತು ಇತರ ಕೇಂದ್ರ ಸೇವೆಗಳಲ್ಲಿ ಸೇಚೆ ಸಲ್ಲಿಸಲಿದ್ದಾರೆ.

ಶಕ್ತಿ ದುಬೆ, ಹರ್ಷಿತಾ ಗೋಯೆಲ್, ಡೊಂಗ್ರೆ ಅರ್ಚಿತ್ ಪರಾಗ್, ಶಾ ಮಾರ್ಗಿ ಚಿರಾಗ್, ಆಕಾಶ್ ಗರ್ಗ್, ಕೋಮಲ್ ಪುನಿಯಾ, ಆಯುಷಿ ಬನ್ಸಾಲ್, ರಾಜ್ ಕೃಷ್ಣ ಝಾ, ಆದಿತ್ಯ ವಿಕ್ರಂ ಅಗರ್ವಾಲ್, ಮಾಯಾಂಕ್ ತ್ರಿಪಾಠಿ ಇವರು ಟಾಪ್ 10ರಲ್ಲಿ ಇರುವವರು. ಈ ಫಲಿತಾಂಶವನ್ನು upsc.gov.in ಗೆ ಭೇಟಿ‌ನೀಡುವ ಮೂಲಕ ಫಲಿತಾಂಶವನ್ನು ಪರಿಶೀಲನೆ ಮಾಡಬಹುದಾಗಿದೆ.

ಯುಪಿಎಸ್ಸಿ ಒಟ್ಟು 1,009 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಸಾಮಾನ್ಯ ವರ್ಗದಿಂದ 335 ಅಭ್ಯರ್ಥಿಗಳಿದ್ದಾರೆ. ಆರ್ಥಿಕವಾಗಿ ದುರ್ಬಲ ವರ್ಗದಿಂದ 109 ಅಭ್ಯರ್ಥಿಗಳು ಮತ್ತು OBC ವರ್ಗದಿಂದ 318 ಅಭ್ಯರ್ಥಿಗಳು ಇದ್ದಾರೆ. ಹತ್ತು ಮಂದಿ ಟಾಪರ್ ಸ್ಥಾನದಲ್ಲಿದ್ದು, ಭಾರತೀಯ ಸೇವೆಗಳಲ್ಲಿ ಕೆಲಸ ನಿರ್ವಹಿಸಲಿದ್ದಾರೆ. ಇಂದು ಪಾಸಾಗಿರುವ ಎಲ್ಲರಿಗೂ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ದೊಡ್ಡ ದೊಡ್ಡ ಕನಸು ಕಂಡು ಪರೀಕ್ಷೆ ಬರೆದಿದ್ದವರ ಕನಸು ಈಡೇರುವ ಕಾಲವೂ ಬಂದಿದೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment