ಲೇಡಿ ಸಿಂಗಂ ಎಂದೇ ಖ್ಯಾತಿ ಪಡೆದ ಈ ಪಿಎಸ್ಐ ಅನ್ನಪೂರ್ಣ ಯಾರು..?

1 Min Read

ಹುಬ್ಬಳ್ಳಿ; ಐದು ವರ್ಷದ ಮಗುವನ್ನು ಅಪಹರಿಸಿ, ಅತ್ಯಚಾರ‌ಎಸಗಲು ಪ್ರಯತ್ನಿಸಿ, ಮಗುವನ್ನೇ ಕೊಂದ ಪಾಪಿಗೆ ಮಹಿಳಾ ಪಿಎಸ್ಐ ಎನ್ಕೌಂಟರ್ ಶಿಕ್ಷೆ ನೀಡಿದ್ದಾರೆ. ನಿನ್ನೆಯಿಂದಾನೂ ಸೋಷಿಯಲ್ ಮೀಡಿಯಾದಲ್ಲೆಲ್ಲಾ ಪಿಎಸ್ಐ ಅನ್ನಪೂರ್ಣ ಎಲ್ಲರ ಪಾಲಿಗೂ ದೇವತೆಯಾಗಿದ್ದಾರೆ. ಅದರಲ್ಲೂ ಅತ್ಯಚಾರ ಆರೋಪಿಯ ದೇಹಕ್ಕೆ ಗುಂಡಿಳಿಸಿ, ಅನ್ನಪೂರ್ಣ ಇತಿಹಾಸವ್ನೇ ಸೃಷ್ಟಿಸಿದ್ದಾರೆ. ಅಷ್ಟಕ್ಕೂ ಈ ಅನ್ನಪೂರ್ಣ ಹಿನ್ನಲೆ ಏನು..? ಅವರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

 

ಹುಬ್ಬಳ್ಳಿಯ ಅಶೋಕ ನಗರದ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕೆಲಸ ಮಾಡುತ್ತಿದ್ದಾರೆ. ಇವರು ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ್ ನವರು. ರೈತಾಪಿ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದರು. ತಾಯಿಯೇ ಎಲ್ಲಾ ಆಗಿದ್ದರು. ಮಕ್ಕಳನ್ನು ತಾಯಿಯೇ ಸಾಕಿದ್ದರು. 2018ರ ಬ್ಯಾಚ್ ನಲ್ಲಿ ಪಾಸ್ ಆಗಿ ಪಿಎಸ್ಐ ಆದವರು ಅನ್ನಪೂರ್ಣ.

ಅನ್ನಪೂರ್ಣ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದರು. ಬಳಿಕೆ ಬೆಂಗಳೂರಿನ ಜಿಕೆವಿಕೆಗೆ ಬಂದು ಸೇರಿದ ಅನ್ನಪೂರ್ಣ ಗೋಲ್ಡ್ ಮೆಡಲ್ ಪಡೆದಿದ್ದರು. ಕೃಷಿಯಲ್ಲಿ ಎಂಎಸ್ಸಿ ಪಡೆದಿದ್ದರು, ಪೊಲೀಸ್ ಇಲಾಖೆಯನ್ನೇ ಆಯ್ಕೆ ಮಾಡಿಕೊಂಡರು. ಅನ್ನಪೂರ್ಣ ಅವರು ಈ ಮೊದಲು ಹುಬ್ಬಳ್ಳಿಯ ಶಹರ ಠಾಣೆ, ಸಿಇಎನ್ ಠಾಣೆಯಲ್ಲಿ ಪಿಎಸ್ಐ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲಿಂದ ನೇರವಾಗಿ ಹುಬ್ಬಳ್ಳಿಯ ನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡ ಅನ್ನಪೂರ್ಣ, ಇದೀಗ ರಾಜ್ಯಾದ್ಯಂತ ಫೇಮಸ್ ಆಗಿದ್ದಾರೆ. ಲೇಡಿ ಸಿಂಗಂ ಎಂದೇ ಖ್ಯಾತಿ ಪಡೆದಿದ್ದಾರೆ. ಅನ್ನಪೂರ್ಣ ಮಾಡಿದ ಆ ಒಂದು ಎನ್ಕೌಂಟರ್ ರಾಜದಯದ ಜನ ಅವರನ್ನ ಹೊಗಳುತ್ತಿದ್ದಾರೆ. ಅತ್ಯಾಚಾರ‌ಮಾಡಿದ ಆರೋಪಿಗೆ ಹೀಗೆ ಶಿಕ್ಷಿಸಬೇಕೆನ್ನುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *