ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಸಚುವ ಮಧು ಬಂಗಾರಪ್ಪ ಅವರು ಫಲಿತಾಂಶವನ್ನು ಪ್ರಕಟ ಮಾಡಿ, ಫೇಲ್ ಆದ ಮಕ್ಕಳಿಗೆ ಮತ್ತಷ್ಟು ಅವಕಾಶಗಳಿದಾವೆ, ಪರೀಕ್ಷೆಯನ್ನ ಬರೆಯಿರಿ ಎಂಬ ಆತ್ಮವಿಶ್ವಾಸ ತುಂಬಿದ್ದಾರೆ. ಇನ್ನು ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ ಸಿಕ್ಕಿದೆ ಎಂಬುದನ್ನು ನೋಡುವುದಾದರೆ,
ಉಡುಪಿ ಮೊದಲ ಸ್ಥಾನ, ದಕ್ಷಿಣ ಕನ್ನಡ ಎರಡನೇ ಸ್ಥಾನ, ಬೆಂಗಳೂರು ದಕ್ಷಿಣ ಮೂರನೇ ಸ್ಥಾನ ಉಳಿದಂತೆ 4. ಕೊಡಗು, 5. ಬೆಂಗಳೂರು ಉತ್ತರ, 6.ಉತ್ತರ ಕನ್ನಡ, 7. ಶಿವಮೊಗ್ಗ, 8
ಬೆಂಗಳೂರು ಗ್ರಾಮಾಂತರ, 9.ಚಿಕ್ಕಮಗಳೂರು, 10.ಹಾಸನ, 11 ಚಿಕ್ಕಬಳ್ಳಾಪುರ, 13. ಮೈಸೂರು, 13. ಚಾಮರಾಜನಗರ, 14. ಮಂಡ್ಯ, 15.ಬಾಗಲಕೋಟೆ, 16.ಕೋಲಾರ, 17.ಧಾರವಾಡ, 18.ತುಮಕೂರು, 19.ರಾಮನಗರ, 20.ದಾವಣಗೆರೆ, 21.ಹಾವೇರಿ, 22.ಬೀದರ್, 23.ಕೊಪ್ಪಳ, 24.ಚಿಕ್ಕೋಡಿ, 25.ಗದಗ, 26.ಬೆಳಗಾವಿ, 27.ಬಳ್ಳಾರಿ, 28.ಚಿತ್ರದುರ್ಗ, 29.ವಿಜಯಪುರ, 30.ರಾಯಚೂರು, 31.ಕಲಬುರಗಿ, 32.ಯಾದಗಿರಿ
ವಿಜ್ಞಾನ ವಿಭಾಗದಲ್ಲಿ ಅಮೂಲ್ಯ ಕಾಮತ್
ದಕ್ಷಿಣ ಕನ್ನಡದ ಎಕ್ಸ್ ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ದೀಪಶ್ರೀ ಮೊದಲ ಸ್ಥಾನ
ದಕ್ಷಿಣ ಕನ್ನಡದ ಕೆನರಾ ಪಿಯು ಕಾಲೇಜು ವಿದ್ಯಾರ್ಥಿ600 ಅಂಕಗಳಿಗೆ 599 ಅಂಕ ಪಡೆದಿದ್ದಾರೆ.
ಕಲಾ ವಿಭಾಗದಲ್ಲಿ ಸಂಜನಾ ಬಾಯಿ ಪ್ರಥಮ ಸ್ಥಾನ ಪಡೆದಿದ್ದಾರೆ. ಬಳ್ಳಾರಿ ಜಿಲ್ಲೆಯ ಇಂದು ಪಿಯು ಕಾಲೇಜಿನ ವಿದ್ಯಾರ್ಥಿಯಾಗಿದ್ದು, 600ಕ್ಕೆ 597 ಅಂಕ ಪಡೆದಿದ್ದಾರೆ.

















