ತೂಕ ಇಳಿಕೆಗೆ ಊಟದ‌ನಂತರ ಹೀಗೆ ಮಾಡಿ.. ರಿಸಲ್ಟ್ ನೋಡಿ

1 Min Read

ಸಾಕಷ್ಟು ಜನ ತೂಕ ಹೆಚ್ಚಾಯ್ತು ಅಂತ ಒದ್ದಾಡುವವರೆ ಜಾಸ್ತಿ. ಅದಕ್ಕಾಗಿ ಸಿಕ್ಕಾಪಟ್ಟೆ ಡಯೆಟ್ ಮಾಡ್ತಾರೆ, ಊಟ ಬಿಡ್ತಾರೆ, ವರ್ಕೌಟ್ ಮಾಡ್ತಾರೆ. ಆದರೆ ಊಟವನ್ನು ಮಾಡಿ ಈ ಒಂದಷ್ಟು ಟಿಪ್ಸ್ ಫಾಲೋ ಮಾಡಿದ್ರೆ ಖಂಡಿತ ನೀವೂ ತೂಕವನ್ನು ಇಳಿಕೆ ಮಾಡಬಹುದು. ಇದು ಆರೋಗ್ಯಕರ ಡಯೆಟ್ ಆಗಿದೆ. ಹಾಗಾದ್ರೆ ಏನು ಮಾಡಬೇಕು. ಇಲ್ಲಿದೆ ನೋಡಿ ಮಾಹಿತಿ. ಇದೆಲ್ಲ ಊಟವಾದ ಮೇಲೆ ಸೇವಿಸಿ

* ಒಂದು ಲೋಟ ಬೆಚ್ಚಗಿನ ನೀರು ತೆಗೆದುಕೊಂಡು ಅದಕ್ಕೆ ನಿಂಬೆ ಹಣ್ಣಿನ ರಸ ಹಾಗೂ ಜೇನು ತುಪ್ಪ ಸೇರಿಸಿ ಕುಡಿಯಿರಿ. ಇದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ. ಇದರಿಂದ ತೂಕ ಇಳಿಕೆಗೂ ಸಹಾಯವಾಗುತ್ತದೆ. ಇದನ್ನು ಕುಡಿಯುವುದರಿಂದ ರಾತ್ರಿ ಸಮಯದಲ್ಲಿ ಕೊಬ್ಬನ್ನು ಕರಗಿಸಲು ಸಹಾಯವಾಗುತ್ತದೆ.

* ಇನ್ನು ಅರಿಶಿನದ ಹಾಲಿನ ಮಹತ್ವ ಎಲ್ಲರಿಗೂ ತಿಳಿದಿದೆ. ರಾತ್ರಿ ಮಲಗುವ ಸಮಯದಲ್ಲಿ ಅರಿಶಿನ ಮಿಶ್ರಿತ ಹಾಲನ್ನ ಕುಡಿಯಿರಿ. ಇದು ಜೀರ್ಣಕ್ರಿಯೆಗೂ ಸಹಾಯಕ, ಕೊಬ್ಬು ಕರಗುವಿಕೆಗೂ ಸಹಾಯ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

* ದಾಲ್ಚಿನ್ನಿ ನೀರು ಕೂಡ ತೂಕ ಇಳಿಕೆಗೆ ಸಹಾಯವಾಗಿದೆ. ದಾಲ್ಚಿನ್ನಿಯನ್ನು ನೆನೆಸಿಟ್ಟ ನೀರನ್ನು ಕುಡಿಯುವುದರಿಂದ ಹಸಿವಿನ ನಿಗ್ರಹವಾಗುತ್ತದೆ, ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಣ ಮಾಡುತ್ತದೆ, ಊಟದ ನಂತರ ಕುಡಿಯುವುದರಿಂದ ತೂಕ ಇಳಿಕೆಗೆ ಸಹಾಯವಾಗುತ್ತದೆ.

* ಊಟದ ಬಳಿಕ ಸೋಂಪು ತಿನ್ನುವ ರೂಢಿ ಇದ್ದೇ ಇದೆ. ಅದರ ಬದಲು ಸೋಂಪು ಚಹಾ ಮಾಡಿಕೊಂಡು ಕುಡಿಯುವುದರಿಂದ ಇನ್ನಷ್ಟು ಹೆಚ್ಚಿನ ಲಾಭ ಪಡೆಯಬಹುದಾಗಿದೆ. ಇದು ಹೊಟ್ಟೆಯುಬ್ಬರವನ್ನು ನಿಯಂತ್ರಿಸುತ್ತದೆ.

* ಶುಂಠಿಯಲ್ಲಿ ಆಂಟಿ ಆಕ್ಸಿಡೆಂಟ್ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಜೀರ್ಣಕ್ರಿಯೆಗೆ ಅತ್ಯುತ್ತಮ ಮದ್ದು ಶುಂಠಿ ಟೀ. ಇದನ್ನು ಕುಡಿಯುವುದರಿಂದ ಜೀರ್ಣಕ್ರಿಯೆಯೂ ಸರಾಗವಾಗುತ್ತದೆ, ತೂಕವೂ ಇಳಿಕೆಯಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *