Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರೇಣುಕಾಚಾರ್ಯ ಅವರಿಗೆ ಯತ್ನಾಳ್ ಹಂದಿ ಎಂದು ಸಂಬೋಧಿಸಿದರಾ..? ಇಂದು ಸವಾಲಾಕಿದ ಶಾಸಕ ಹೇಳಿದ್ದೇನು..?

---Advertisement---

ಹುಬ್ಬಳ್ಳಿ; ಬಿಜೆಪಿಯಿಂದ ಶಾಸಕ ಯತ್ನಾಳ್ ಅವರನ್ನ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ. ಆದರೆ ಮತ್ತೆ ಮತ್ತೆ ವಿಜಯೇಂದ್ರ ವಿರುದ್ಧ ಗುಡುಗುವುದನ್ನು ಮಾತ್ರ ಕಡಿಮೆ ಮಾಡಿಲ್ಲ. ಇದೀಗ ವಿಜಯೇಂದ್ರ ಅವರಿಗೆ ರಾಜೀನಾಮೆ ನೀಡಿ ಚುನಾವಣೆಗೆ ಬಾ ಎಂದು ಸವಾಲು ಹಾಕಿದ್ದಾರೆ.

 

ಮತ್ತೆ ಬಿಜೆಪಿಯವರು ಕರೆದರೆ ಹೋಗ್ತೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿ ಯತ್ನಾಳ್, ಈ ಕುಟುಂಬದಿಂದ ಮುಕ್ತ ಆದ ಮೇಲೆ ಹೋಗ್ತೀನಿ. ರಾಜಕಾರಣದಲ್ಲಿ ಸಾಧ್ಯವಿಲ್ಲದ್ದು ಏನಿಲ್ಲ. ದೇವರಾಜ್ ಅರಸು ಫ್ಯಾಮಿಲಿ ಎಲ್ಲಿದೆ, ಎಸ್.ಎಂ.ಕೃಷ್ಣ ಫ್ಯಾಮಿಲಿ ಎಲ್ಲಿದೆ, ಜೆ.ಹೆಚ್.ಪಾಟೀಲ್ ಫ್ಯಾಮಿಲಿ ಎಲ್ಲಿದೆ. ನಿಜಲಿಂಗಪ್ಪನವರ ಫ್ಯಾಮಿಲಿ ಎಲ್ಲಿದೆ. ಇದು ಯಾವುದು ಶಾಶ್ವತ ಅಲ್ಲ. ಹೋಗೋದೆ ಒಂದು ದಿವಸ. ಯಾವುದೇ ಒಂದು ಪಕ್ಷ ಒಂದು ಕುಟುಂಬಕ್ಕೆ ಸೀಮಿತ ಆಗಬಾರದು. ಮೊದಲು ವಿಜಯೇಂದ್ರಗೆ ರಾಜೀನಾಮೆ ಕೊಡೋದಕ್ಕೆ ಹೇಳಿ. ಡಿಕೆ ಶಿವಕುಮಾರ್ ಹೇಳ್ಯಾನಾ, ನಮ್ಮ ಭಿಕ್ಷೆಯಿಂದ ಎಂಎಲ್ಎ ಆಗಿದ್ದೀಯಪ್ಪ ಅಂತ. ಮೊದಲು ವಿಜಯೇಂದ್ರ ರಾಜೀನಾಮೆ ಕೊಡಲಿ, ನಾನು ಕೊಡ್ತೀನಿ. ಇಬ್ರು ಎಲೆಕ್ಷನ್ ಗೆ ಬರೋಣಾ.

ಇದೇ ವೇಳೆ ಪರೋಕ್ಷವಾಗಿ ರೇಣುಕಾಚಾರ್ಯ ಬಗ್ಗೆ ಮಾತನಾಡಿದ್ದು, ಧಮ್ ಇದೆಯಾ ವಿಜಯೇಂದ್ರ ಇಂತಹ ಹಂದಿಗಳಿಂದ ಯಾಕ್ ಮಾತಾಡಿಸ್ತೀಯಾ. ತಾವೊಬ್ಬ ಸ್ವಾಮಿಯಾಗಿ ಎಸ್ಸಿ ಸೈಡಿಗೆ ಕೂತ್ಕೊಳೋಕೆ ನಾಚಿಕೆಯಾಗೋದಿಲಗವಾ ವಿಜಯೇಂದ್ರ ನಿನ್ನ ಶಿಷ್ಯನಿಗೆ. ನಿನಗೆ ಧಮ್ ಇದ್ರೆ ನೇರವಾಗಿ ನೀನು ನನ್ನ ಬಗ್ಗೆ ಮಾತನಾಡು. ನನಗೆ ರಾಜೀನಾಮೆ ಕೇಳ್ತೀಯಲ್ಲ, ನೀನು ರಾಜೀನಾಮೆ ಕೊಡು. ಶಿಕಾರಿಪುರದಲ್ಲಿ ನೀನು ವಿಜಯಪುರದಲ್ಲಿ ನಾನು. ನನಗೆ ಸಾಬ್ರ ವೋಟೇ ಬೇಡ. ಅವ ಅಂದು ಡಿಕೆಶಿವಕುಮಾರ್ ಹೇಳಿದಾಗಲೇ ಹೇಳಬಹುದಿತ್ತಲ್ಲ. ನಾನು ಬಿಜೆಪಿ ವೋಟಿನಿಂದ ಗೆದ್ದದ್ದು ಅಂತ. ಹೇಳೆ ಇಲ್ಲ. ನಾನು ಹೇಳ್ತೇನೆ. ಬಾ ಇಬ್ಬರು ರಾಜೀನಾಮೆ ಕೊಡೋಣಾ. ಆದರೆ ಈ ಹಂದಿಗಳಿಂದ ಮಾತಾಡಿಸಬೇಡ. ಹಂದಿಗಳು ಹೊರಗೆ ಅಡ್ಡಾಡತವಾ. ಇಬ್ಬರು ಚುನಾವಣೆಗೆ ನಿಲ್ಲೋಣಾ ಎಂದು ವಿಜಯೇಂದ್ರಗೆ ಸವಾಲು ಹಾಕಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment