ಬಳ್ಳಾರಿ ಜನತೆಗೆ ಕರ ಏರಿಕೆ ಬಿಸಿ : ಹೆಚ್ಚಾಯ್ತು ನೀರಿನ ಕರ ಮತ್ತು ಒಳಚರಂಡಿ ಶುಲ್ಕದ ದರ : ಈಗ ಎಷ್ಟಿದೆ ಗೊತ್ತಾ ?

suddionenews
2 Min Read

ಬಳ್ಳಾರಿ,ಏ.02 : ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ 03 ವರ್ಷಕ್ಕೊಮ್ಮೆ ನೀರಿನ ಕರ ಹಾಗೂ ಒಳಚರಂಡಿ ಶುಲ್ಕದ ದರಗಳನ್ನು ಪರಿಷ್ಕರಿಸಲು ಅವಕಾಶವಿದ್ದು, ಮಹಾಪೌರರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಏಪ್ರಿಲ್ 01 2025 ರಿಂದ ಜಾರಿಗೆ ಬರುವಂತೆ ಪರಿಷ್ಕೃತ ದರಗಳನ್ನು ಸರ್ವಾನುಮತದಿಂದ ಒಪ್ಪಿ ತೀರ್ಮಾನಿಸಲಾಗಿದೆ ಎಂದು ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.

ನೀರಿನ ದರ:
ಗೃಹ ಬಳಕೆ: ಪ್ರಸ್ತುತ ದರ ರೂ.175, ಪರಿಷ್ಕರಿಸಿದ ದರ ರೂ.200(ಪ್ರತಿ ತಿಂಗಳಿಗೆ).
ಗೃಹೇತರ ಬಳಕೆ: ಪ್ರಸ್ತುತ ದರ ರೂ.400, ಪರಿಷ್ಕರಿಸಿದ ದರ ರೂ.25 (ಪ್ರತಿ ಕಿಲೊ ಲೀಟರ್‌ಗೆ)  (ಮಾಲೀಕರು ಪಾಲಿಕೆಯಿಂದ ಮೀಟರ್‌ನ್ನು ಖರೀದಿಸಿ ಅಳವಡಿಸಿಕೊಳ್ಳತಕ್ಕದ್ದು)
ವಾಣಿಜ್ಯ: ಪ್ರಸ್ತುತ ದರ ರೂ.700, ಪರಿಷ್ಕರಿಸಿದ ದರ ರೂ.30 (ಪ್ರತಿ ಕಿಲೊ ಲೀಟರ್‌ಗೆ)  (ಮಾಲೀಕರು ಪಾಲಿಕೆಯಿಂದ ಮೀಟರ್‌ನ್ನು ಖರೀದಿಸಿ ಅಳವಡಿಸಿಕೊಳ್ಳತಕ್ಕದ್ದು) ಪಾಲಿಕೆಯ ವ್ಯಾಪ್ತಿಗೆ ಒಳಪಡದ ಪ್ರದೇಶಗಳಿಗೆ ಬಲ್ಕ್ ಮೀಟರ್ ಅಳವಡಿಸಿ ಪ್ರತಿ ಕಿಲೋ ಲೀಟರ್ ಗೆ ರೂ.30/-ರಂತೆ ಪಡೆಯುವುದು.
ಕೈಗಾರಿಕೆ: ಪ್ರಸ್ತುತ ದರ ರೂ.700, ಪರಿಷ್ಕರಿಸಿದ ದರ ರೂ.40 ಪ್ರತಿ ಕಿಲೊ ಲೀಟರ್‌ಗೆ  (ಮಾಲೀಕರು ಪಾಲಿಕೆಯಿಂದ ಮೀಟರ್‌ನ್ನು ಖರೀದಿಸಿ ಅಳವಡಿಸಿಕೊಳ್ಳತಕ್ಕದ್ದು) ಪಾಲಿಕೆಯ ವ್ಯಾಪ್ತಿಗೆ ಒಳಪಡದ ಪ್ರದೇಶಗಳಿಗೆ ಬಲ್ಕ್ ಮೀಟರ್ ಅಳವಡಿಸಿ ಪ್ರತಿ ಕಿಲೋ ಲೀಟರ್ ಗೆ ರೂ.40/-ರಂತೆ ಪಡೆಯುವುದು.

ಒಂದು ಭಾರಿ ನೀರು ಸಂಪರ್ಕಗಳಿಗೆ ವಿಧಿಸುವ ದರ:
ಗೃಹ ಬಳಕೆ: ಪ್ರಸ್ತುತ ದರ-5000/-, ಪರಿಷ್ಕರಿಸಿದ ದರ-6000/-
ಗೃಹೇತರ ಬಳಕೆ: ಪ್ರಸ್ತುತ ದರ-10,000/-, ಪರಿಷ್ಕರಿಸಿದ ದರ-15,000/-
ವಾಣಿಜ್ಯ/ಕೈಗಾರಿಕೆ: ಪ್ರಸ್ತುತ ದರ-10,000/-, ಪರಿಷ್ಕರಿಸಿದ ದರ-25,000/-
*ಒಳಚರಂಡಿ ಶುಲ್ಕದ ದರ:*
ಗೃಹ ಬಳಕೆಯ ಪ್ರತಿ ಬೇಸಿನ್‌ಗೆ: ಪ್ರಸ್ತುತ ದರ-35 ರೂ., ಪರಿಷ್ಕರಿಸಿದ ದರ-50 ರೂ. (ಪ್ರತಿ ಬೇಸಿನ್/ತಿಂಗಳು)
ಲಾಡ್ಜಿAಗ್,  ಬೋರ್ಡಿಂಗ್/ಅಪಾರ್ಟ್ಮೆAಟ್ ಹಾಗೂ ಇನ್ನಿತರೆ ಬಹುಮಹಡಿ ಕಟ್ಟಡಗಳ ಪ್ರತಿ ಬೇಸಿನ್‌ಗೆ: ಪ್ರಸ್ತುತ ದರ-35 ರೂ., ಪರಿಷ್ಕರಿಸಿದ ದರ-100 ರೂ. (ಪ್ರತಿ ಬೇಸಿನ್/ತಿಂಗಳು)
ಹೋಟಲ್/ರೆಸ್ಟೊರೆAಟ್: ಪ್ರಸ್ತುತ ದರ-35 ರೂ., ಪರಿಷ್ಕರಿಸಿದ ದರ-2,500 ರೂ. (ಪ್ರತಿ ಬೇಸಿನ್/ತಿಂಗಳು)
*ಒAದು ಬಾರಿ ಒಳಚರಂಡಿ ಸಂಪರ್ಕಗಳಿಗೆ ವಿಧಿಸುವ ದರ:*
ಗೃಹ ಬಳಕೆಗೆ: ಪ್ರಸ್ತುತ ದರ-500/-, ಪರಿಷ್ಕರಿಸಿದ ದರ-3000/-.
ಲಾಡ್ಜಿಂಗ್ ಮತ್ತು ಬೋರ್ಡಿಂಗ್: ಪ್ರಸ್ತುತ ದರ-1,000/-, ಪರಿಷ್ಕರಿಸಿದ ದರ-15,000/-.
ಹೋಟಲ್/ ರೆಸ್ಟೊರೆಂಟ್: ಪ್ರಸ್ತುತ ದರ-1,000/-, ಪರಿಷ್ಕರಿಸಿದ ದರ-20,000/-.
ಸಾರ್ವಜನಿಕರು ನಿಗದಿತ ಅವಧಿಯಲ್ಲಿ ನೀರಿನ ಕರ ಹಾಗೂ ಒಳಚರಂಡಿ ಶುಲ್ಕವನ್ನು ಪಾವತಿಸಿ ಪಾಲಿಕೆಯ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.i

Share This Article
Leave a Comment

Leave a Reply

Your email address will not be published. Required fields are marked *