ಚಿತ್ರದುರ್ಗ : ನಗರದ ಮಧ್ಯಭಾಗದಲ್ಲಿ ಸಂಭವಿಸಿದ ಅಗ್ನಿ ಅವಘಡ : ಘಟನೆಗೆ ಅಸಲಿ ಕಾರಣವೇನು ಗೊತ್ತಾ ?

2 Min Read

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 31: ಆಕಸ್ಮಿಕ ಬೆಂಕಿಯಿಂದಾಗಿ ನಗರದ ಬಿ.ಡಿ. ರಸ್ತೆಯ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ (ಎಸ್.ಬಿ.ಐ. ವೃತ್ತ) ಸಮೀಪವಿರುವ ವೀರ ಸಾವರ್ಕರ್ ರಸ್ತೆಯಲ್ಲಿದ್ದ ಶ್ರೀ ನಂದೀಶ್ವರ ಫೋಟೋ ಫ್ರೇಂ ವರ್ಕ್ಸ್ ಸಂಪೂರ್ಣ ಅಗ್ನಿಗೆ ಆಹುತಿಯಾದ ಪರಿಣಾಮ ಅಂಗಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಸ್ತುಗಳು ಸುಟ್ಟು ಭಸ್ಮವಾಗಿದ ಘಟನೆ ನಗರದಲ್ಲಿ ನಡೆದಿದೆ.

ಘಟನೆ ಹಿನ್ನೆಲೆ : ಪಂಚಾಕ್ಷರಿ ಮತ್ತು ಶೃತಿ ಕೀರ್ತಿ ಅವರ ಮಾಲೀಕತ್ವದ ವೀರ ಸಾವರ್ಕರ್ ರಸ್ತೆಯಲ್ಲಿದ್ದ ಶ್ರೀ ನಂದೀಶ್ವರ ಫೋಟೋ ಫ್ರೇಂ ವರ್ಕ್ಸ್ ಅಂಗಡಿಯಿದೆ. ಇದರ ಪಕ್ಕದಲ್ಲಿ ಖಾಲಿ ನಿವೇಶನವಿದೆ. ಆ ನಿವೇಶನಕ್ಕೆ ಈ ಮೊದಲು ಗೇಟ್ ಇತ್ತು. ಹಾಗಾಗಿ ಇಲ್ಲಿಯವರೆಗೂ ನಮಗೆ ಯಾವುದೇ ತೊಂದರೆಯಾಗಿರಲಿಲ್ಲ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಈ ನಿವೇಶನವನ್ನು ಸ್ವಚ್ಛಗೊಳೊಸಲಾಗಿತ್ತು. ಕಸವನ್ನು ಅಲ್ಲಿಯೇ ಬಿಡಲಾಗಿತ್ತು. ನಾವು ಅವರಿಗೆ ಕಸವನ್ನು ತೆಗೆಸುವಂತೆಯೂ ಹೇಳಿದ್ದೆವು. ಆದರೆ ಕಸದ ರಾಶಿ ಅಲ್ಲೇ ಇತ್ತು. ಈ ಘಟನೆ ನಡೆಯುವ ಅಂದರೆ ಸುಮಾರು 7 ಗಂಟಯವರೆಗೂ ನಮ್ಮ ಅಂಗಡಿಯಲ್ಲೇ ಇದ್ದೆವು. ನಾವು ಬಂದ ಸ್ವಲ್ಪ ಸಮಯದ ನಂತರ ಅಂದರೆ ಸುಮಾರು 7:45 ರ ಬೇಳೆಗೆ ಅಲ್ಲಿಂದ ನಮಗೆ ಯಾರೋ ಫೋನ್ ಮಾಡಿ ಹೀಗೆ ನಿಮ್ಮ ಅಂಗಡಿಯ ಪಕ್ಕದಲ್ಲಿದ್ದ ಖಾಲಿನಿವೇಶನದಲ್ಲಿದ್ದ ಕಸದ ರಾಶಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದು. ಈ ಬೆಂಕಿ ನಿಮ್ಮ ಫ್ರೇಂ ವರ್ಕ್ಸ್ ಅಂಗಡಿಗೂ ವ್ಯಾಪಿಸಿದೆ ಎಂದು ತಿಳಿಸಿದರು ‌. ಕೂಡಲೇ ನಾವು ಸ್ಥಳಕ್ಕೆ ಬಂದೆವು. ಅಷ್ಟೊತ್ತಿಗಾಗಲೇ ಬೆಂಕಿಯ ತೀವ್ರತೆ ಹೆಚ್ಚಾಗಿತ್ತು.

ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಾ ತಕ್ಷಣವೇ ಬಂದು ಬೆಂಕಿ ನಂದಿಸುವ ಕಾರ್ಯ ಮಾಡಿದರು. ಬೆಂಕಿಯ ತೀವ್ರತೆಯನ್ನು ಕಡಿಮೆ ಮಾಡಲು ಹರಸಾಹಸ ಪಡಬೇಕಾಯಿತು. ರಾತ್ರಿ ಸುಮಾರು 11 : 30 ವರೆಗೂ ಅಗ್ನಿಶಾಮಕ ದಳದ ಸಿಬ್ಬಂದಿಯವರು ಬೆಂಕಿ ನಂದಿಸುವ ಕೆಲಸವನ್ನು ಮಾಡಿದರು. ನೋಡುನೋಡುತ್ತಲೇ ಬೆಂಕಿಯ ಕೆನ್ನಾಲಿಗೆಯು ನಮ್ಮ ಅಂಗಡಿಗೆ ಹೊಂದಿಕೊಂಡಿದ್ದ ಎಸ್.ಬಿ.ಐ ರಸ್ತೆಯ ಕರ್ನಾಟಕ ಒನ್ ಕೇಂದ್ರಕ್ಕೂ ಆವರಿಸಿತು. ಈ ಹಬ್ಬಕ್ಕೆಂದು ನಾವು ಫ್ರೇಂ ವರ್ಕ್ಸ್ ಗೆಂದು ಹೆಚ್ಚಿನ ಸರಕುಗಳನ್ನು ತರಿಸಿದ್ದೆವು. ಈ ಘಟನೆಯಿಂದ ನಮಗೆ ಅಂದಾಜು 8 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಹಾಗೂ ಕರ್ನಾಟಕ ಒನ್ ಕೇಂದ್ರದ ಕಂಪ್ಯೂಟರ್, ಪ್ರಿಂಟರ್, ಪೀಠೋಪಕರಣಗಳು ಬೆಂಕಿಗಾಹುತಿಯಾಗಿದ್ದು ಸುಮಾರು ಆರು ಲಕ್ಷ ರೂಪಾಯಿಗಳಷ್ಟು ಹಾನಿಯಾಗಿದೆ ಎಂದು ಸುದ್ದಿಒನ್ ಗೆ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *