Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಚೆನ್ನೈ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಹಿಂಗ್ಯಾಕ್ ಆಡುದ್ರು..?

---Advertisement---

ಐಪಿಎಲ್ 18ನೇ ಸೀಸನ್ ನಲ್ಲಿ ಮೊದಲ ಗೆಲುವು ಕಂಡಿದ್ದ ಆರ್ಸಿಬಿ ಇಂದು ಚೆನ್ನೈ ವಿರುದ್ದ ಸೆಣೆಸಾಡುತ್ತಿದೆ. ಈಗಾಗಲೇ ಚೆನ್ನೈನ ಎರಡು ವಿಕೆಟ್ ಅನ್ನು ಉರುಳಿಸಿದೆ. 197 ಟಾರ್ಗೆಟ್ ಅನ್ನು ಚೆನ್ನೈ ನೀಡಿದೆ. ಈ ಪಂದ್ಯವನ್ನ ಆರ್ಸಿಬಿ ಗೆದ್ದೇ ಗೆಲ್ಲುತ್ತದೆ ಎಂಬ ನಿರೀಕ್ಷೆ ಇದೆ. ಹೈವೋಲ್ಟೇಜ್ ಪಂದ್ಯವನ್ನ ವೀಕ್ಷಕರು ಕುತೂಹಲದಿಂದ ವೀಕ್ಷಿಸ್ತಾ ಇದ್ದಾರೆ. ಆದರೆ ಇದರ ನಡುವೆ ಕೊಹ್ಲಿ ಬಗ್ಗೆ ಬೇಸರವೂ ಮೂಡಿದೆ.

ಸಾಮಾನ್ಯವಾಗಿ ಕೊಹ್ಲಿ ಮೇಲೆ ಸಾಕಷ್ಟು ನಿರೀಕ್ಷೆ ಇದ್ದೇ ಇರುತ್ತದೆ. ಎಲ್ಲಾ ಮ್ಯಾಚ್ ನಲ್ಲೂ ಒಳ್ಳೆ ರನ್ ಗಳಿಸುತ್ತಾರೆ ಎಂಬ ನಂಬಿಕೆ ಇತ್ತು. ಆದರೆ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಅಂದುಕೊಂಡಂತೆ ಆಡಿಲ್ಲ. ಟಾಸ್ ಗೆದ್ದ ಚೆನ್ನೈ ಮೊದಲು ಬೌಲಿಂಗ್ ಆಯ್ಕೆ‌ ಮಾಡಿಕೊಂಡಿತ್ತು. ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡಿತ್ತು. ಆರ್​​ಸಿಬಿ ಪರ ಓಪನಿಂಗ್​ ಮಾಡಿದ ಸ್ಟಾರ್ ಬ್ಯಾಟರ್​ ಫಿಲಿಪ್​ ಸಾಲ್ಟ್​​ ಅವರು ಅಬ್ಬರಿಸಿದರು. ಕ್ರೀಸ್​ನಲ್ಲಿ ಇರೋವರೆಗೂ ಎದುರಾಳಿಗಳನ್ನು ಕಾಡಿದರು. ತಾನು ಎದುರಿಸಿದ 16 ಬಾಲ್​ನಲ್ಲಿ 5 ಭರ್ಜರಿ ಫೋರ್​​, 1 ಸಿಕ್ಸರ್​ ಸಮೇತ 32 ರನ್​ ಚಚ್ಚಿದ್ರು.

ಕೊಹ್ಲಿ ಬಂದವರು ಅದೇಕೋ ಆರಂಭದಿಂದಾನೇ ಸ್ಲೋ ಬ್ಯಾಟ್ ಬೀಸಿದರು. ಕೊಹ್ಲಿ ಆಡಿದ 30 ಬಾಲ್ ನಲ್ಲಿ 1 ಸಿಕ್ಸರ್, 2 ಫೋರ್ ಸಮೇತ 31 ರನ್ ಗಳಿಸಿದರು. ಇದನ್ನ ಕಂಡ ಆರ್ಸಿಬಿ ಅಭಿಮಾನಿಗಳು ಆತಂಕಗೊಂಡರು. ಆದರೆ ಇನ್ನುಳಿದವರು ಒಳ್ಳೆ ಪ್ರದರ್ಶನ ತೋರಿಸ್ತಾ ಇದಾರೆ. ಆರ್ಸಿಬಿ – ಚೆನ್ನೈ ಅನ್ನು ಸೋಲಿಸಲಿದೆ ಎಂದೇ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment