ನವದೆಹಲಿ: ಮುಂಬರುವ ಚುನಾವಣೆಗೆ ಕಾಂಗ್ರೆಸ್ ಈಗಿಂದಾನೇ ಪ್ರಚಾರ ಕಾರ್ಯ ಶುರು ಮಾಡಿದೆ. ಈ ಹಿನ್ನೆಲೆ ಪ್ರಿಯಾಂಕ ಗಾಂಧಿ ವಾದ್ರಾ ಗೋವಾದ ಮೋರ್ಪಿರ್ಲಾ ಗ್ರಾಮಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಜನರ ಜೊತೆ ಬೆರೆತು, ಅಲ್ಲಿನ ಸಂಪ್ರದಾಯಗಳಂತೆಯೇ ಕುಣಿದು, ಎಂಜಾಯ್ ಮಾಡಿದ್ದರು.

When 26/11 happened, Rahul Gandhi was partying till wee hours of morning.
Like brother, Priyanka Vadra too is dancing away in Goa while the entire nation is mourning and steeped in sadness as CDS Gen Bipin Rawat is being cremated.
Can anything be more shameful than this? pic.twitter.com/hggjarFJdx
— Amit Malviya (@amitmalviya) December 10, 2021
ಬುಡಕಟ್ಟು ಮಹಿಳೆಯರ ಜೊತೆ ಡೋಲಿನ ಶಬ್ದಕ್ಕೆ ಹೆಜ್ಜೆ ಹಾಕಿದ್ದ ಪ್ರಿಯಾಂಕ ಗಾಂಧಿ ವಿಡಿಯೋವನ್ನು ಕಾಂಗ್ರೆಸ್ ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿತ್ತು. ಬುಡಕಟ್ಟು ಮಹಿಳೆಯರು ಹೆಜ್ಹೆ ಹಾಕಲು ಹೇಳಿದಾಗ ಮೊದಲಿಗೆ ಹಿಂದೇಟು ಹಾಕಿದ್ದ ಪ್ರಿಯಾಂಕ ಗಾಂಧಿ, ಆ ಬಳಿಕ ಅವರ ಮನವಿಗೆ ಸೋತು ಹೆಜ್ಜೆ ಹಾಕಿದ್ದರು. ಮೊರ್ಪಿರ್ಲಾದ ಆತ್ಮವಿಶ್ವಾಸದ ಮಹಿಳೆಯರೊಂದಿಗ ಒಂದು ಫೋಟೋ. ಈ ಮಹಿಳೆಯರು ಗೋವಾದಲ್ಲಿ ಪರಿಸರ ಸಂರಕ್ಷಣೆ ಮತ್ತು ಹಸಿರು ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದರು.

https://twitter.com/priyankagandhi/status/1469275154865745920?t=cWNoUxmzwh9Y1a5sO5QPjg&s=19
ಈ ಟ್ವೀಟ್ ಗೆ ಬಿಜೆಪಿ ಐಟಿ ಸೆಲ್ ಉಸ್ತುವಾರಿ ಅಮಿತ್ ಮಾಳವಿಯಾ ಆಕ್ರೋಶ ವ್ಯಕ್ತಪಡಿಸಿದ್ದು, 26/11 ದುರಂತ ಸಂಭವಿಸಿದಾಗ ರಾಹುಲ್ ಗಾಂಧಿ ಬೆಳಗಿನ ಜಾವದವರೆಗೂ ಪಾರ್ಟಿ ಮಾಡುತ್ತಿದ್ದರು. ಇದೀಗ ಹೆಲಿಕಾಪ್ಟರ್ ಪತನವಾಗಿ ಬಿಪಿನ್ ರಾವತ್ ಹಾಗೂ 12 ಜನರು ಸಾವನ್ನಪ್ಪಿರುವಾಗ ಪ್ರಿಯಾಂಕಾ ವಾದ್ರಾ ಕೂಡ ಗೋವಾದಲ್ಲಿ ನೃತ್ಯ ಮಾಡುತ್ತಿದ್ದಾರೆ. ಇದಕ್ಕಿಂತ ನಾಚಿಕೆಗೇಡು ಇನ್ನೇನಿದೆ? ಎಂದು ಟ್ವೀಟ್ ಮಾಡಿದ್ದಾರೆ.

