ಬೆಂಗಳೂರು; ರೆಬಲ್ ಸ್ಟಾರ್ ಅಂಬರೀಶ್ ಪುತ್ರನ ನಾಮಕರಣ ಇಂದು ಅದ್ದೂರಿಯಾಗಿ ನೆರವೇರಿದೆ. ಬೆಂಗಳೂರಿನ ಖಾಸಗಿ ಹೊಟೇಲ್ ನೆರವೇರಿದ್ದು, ಮೊಮ್ಮಗನಿಗೆ ತಾತನ ಹೆಸರನ್ನ ಇಡಲಾಗಿದೆ. ಅಭಿಷೇಕ್ ಮಗನಿಗೆ ರಾಣಾ ಅಮರ್ ಅಂಬರೀಶ್ ಎಂದು ಹೆಸರಿಡಲಾಗಿದ್ದು, ಅ ಅಕ್ಷರವನ್ನೇ ಇಡುವ ಮೂಲಕ ವಂಶ ಪರಂಪರೆಯನ್ನು ಅನುಸರಿಸಿದ್ದಾರೆ.

ನಾಮಕರಣದ ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ನೆಂಟರು, ಆಪ್ತ ಸ್ನೇಹಿತರು ಭಾಗವಹಿಸಿದ್ದರು. ಕುಚ್ಚ ಸುದೀಪ್ ಕೂಡ ಪತ್ನಿ ಪ್ರಿಯಾ ಜೊತೆಗೆ ಬಂದಿದ್ದು, ಮಗುವಿಗೆ ಉಡುಗೊರೆ ನೀಡಿ ಹಾರೈಸಿದ್ದಾರೆ. ಟೆಡ್ಡಿ ಬೇರ್ ಹಾಗೂ ಮೊಲ ಇರುವ ತೊಟ್ಟಿಲು ತರಹದ ಬುಟ್ಟಿಯನ್ನು ಗಿಫ್ಟ್ ಆಗಿ ನೀಡಿದ್ದಾರೆ. ಅಷ್ಟೇ ಅಲ್ಲ ಅನೇಕ ನಟ, ನಟಿಯರು, ರಾಜಕೀಯ ನಾಯಕರು ಆಗಮಿಸಿ, ಮಗುವಿಗೆ ಶುಭ ಹಾರೈಸಿದರು.

ಇನ್ನು ಮಗುವಿನ ನಾಮಕರಣಕ್ಕೆ ದರ್ಶನ್ ಬಂದೇ ಬರುತ್ತಾರೆ ಎಂಬ ನಿರೀಕ್ಷೆ ಇತ್ತು. ಯಾಕಂದ್ರೆ ಮದರ್ ಇಂಡಿಯಾ ಅಂತಾನೇ ಪ್ರೀತಿ ಇಟ್ಟುಕೊಂಡಿರೋ ಸುಮಲತಾ ಹಾಗೂ ದರ್ಶನ್ ನಡುವೆ ಎಲ್ಲವೂ ಸರಿ ಇಲ್ಲ ಎಂಬ ಚರ್ಚೆ ನಡೆದಿತ್ತು. ಸುಮಲತಾ ಅವರು ಇದಕ್ಕೆ ಸ್ಪಷ್ಟನೆ ಕೂಡ ನೀಡಿದ್ದರು. ಅಮ್ಮ ಮಗನ ಸಂಬಂಧ ಎಂಬುದು ಯಾವಾಗಲೂ ಒಂದೇ ಥರ ಇರುತ್ತದೆ. ಅದಕ್ಕೆ ಇನ್ನೇನೋ ಮಿಕ್ಸ್ ಮಾಡಬೇಡಿ ಎಂದಿದ್ದರು. ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರ ಗೆಲುವಿಗಾಗಿ ಯಶ್ ಹಾಗೂ ದರ್ಶನ್ ಸಾಕಷ್ಟು ಓಡಾಟ ನಡೆಸಿದ್ದರು. ಯಶ್ ಅವರು ತೊಟ್ಟಿಲು ಗಿಫ್ಟ್ ನೀಡಿದ್ದು, ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಇನ್ನು ದೊಡ್ಡ ಮಗ ಎಂದೇ ಹೇಳಿಕೊಳ್ಳುತ್ತಿದ್ದ ದರ್ಶನ್ ಗೈರಾಗಿದ್ದಾರೆ.

