ಸುನೀತಾ ವಿಲಿಯಮ್ಸ್ ಭೂಮಿಗೆ ಬಂದ ಮೇಲೆ ಎದುರಾಗಲಿವೆ ಈ ಆರೋಗ್ಯ ಸಮಸ್ಯೆ..!

 

 

ಬೆಂಗಳೂರು; ಕಡೆಗೂ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಭೂಮಿಗೆ ಬರುವ ಸಮಯ ಹತ್ತಿರವಾಗಿದೆ. ಆದರೆ ಕಳೆದ ಒಂಭತ್ತು ತಿಂಗಳಿನಿಂದ ಬಾಹ್ಯಾಕಾಶದ ವಾತಾವರಣಕ್ಕೆ ಹೊಂದಿಕೊಂಡಿರುವ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಭೂಮಿಗೆ ಬಂದಾಕ್ಷಣವೇ ಇಲಗಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದಿಲ್ಲ. ಅದಕ್ಕೆ ಸಾಕಷ್ಟು ಸಮಯ ಬದಲಾಗುತ್ತದೆ. ಅವರಿಗೆ ಕಾಡುವ ಸಮಸ್ಯೆಗಳೇನು ಎಂಬ ಮಾಹಿತಿ ಇಲ್ಲಿದೆ.

ಈಗಂತೂ ಇಬ್ಬರ ಪಾದಗಳು ಮಗುವಿನಂತೆ ಸ್ಮೂಥ್ ಆಗಿರುತ್ತವೆ. ಯಾಕಂದ್ರೆ ಒಂಭತ್ತು ತಿಂಗಳು ಪಾದವನ್ನು ನೆಲಕ್ಕೆ ಇಟ್ಟಿಲ್ಲ. ತೇಲಾಡಿಕೊಂಡೆ ಇದ್ದ ಕಾರಣ, ಭೂಮಿಗೆ ಬಂದ ಮೇಲೂ ಅದೇ ಅನುಭವವಾಗುತ್ತದೆ. ದೇಹ ಭಾರವಿದೆ ಎಂಬ ಅನುಭವವೇ ಅವರಿಗೆ ಆಗುವುದಿಲ್ಲ. ದೇಹದ ಚರ್ಮವೂ ಮಾಮೂಲಿಯಂತೆ ಇರುವುದಿಲ್ಲ. ಮೂಳೆಯ ಸಾಂಧ್ರತೆ ಹಾಗೂ ದ್ನಾಯು ಕ್ಷೀಣತೆಯ ಸಮಸ್ಯೆಯನ್ನು ಅವರು ಅನುಭವಿಸಿರುತ್ತಾರೆ. ಭೂಮಿಯ ಗುರುತ್ವಾಕರ್ಷಣೆಯೇ ಬೇರೆ ಬಾಹ್ಯಾಕಾಶದ ಗುರುತ್ವಾಕಾರ್ಷಣೆಯೇ ಬೇರೆ. ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಎದುರಾಗಿರುತ್ತದೆ, ಕಣ್ಣಿನಾ ರೇಟಿನಾ ಭಾಗಕ್ಕೂ ಸಮಸ್ಯೆ ಆಗಿರುತ್ತದೆ, ಶ್ವಾಸ ಕೋಶ, ಮೂತ್ರಪಿಂಡ, ಹೃದಯ, ಮೆದುಳಿಗೂ ಸಮಸ್ಯೆಯಾಗಿರುತ್ತದೆ.

ಹೀಗಾಗಿ ಸುನೀತಾ ವಿಲಿಯಮ್ಸ್ ಭೂಮಿಗೆ ಬಂದ ಮೇಲೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಾರೆ. ಇದಕ್ಕೆ ಬಾಹ್ಯಾಕಾಶ ಸಂಸ್ಥೆಗಳೆ ಪುನರ್ವಸತಿ ಕೇಂದ್ರಗಳನ್ನ ತೆರೆಯುತ್ತಾರೆ. ಅಲ್ಲಿ ಗಗನಾಯಾತ್ರಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ದೈನಂದಿನ ವ್ಯಾಯಾಮ, ಬ್ಯಾಲೆನ್ಸ್ ಕಾಯ್ದುಕೊಳ್ಳಲು ತರಬೇತಿ, ಆಹಾರ, ಅಗತ್ಯ ಔಷಧಿಗಳನ್ನು ದೇಹದ ಪರಿಸ್ಥಿತಿಗೆ ಅನುಗುಣವಾಗಿ ನೀಡುವುದು. ನಾಸಾ ವೈದ್ಯಕೀಯ ತಂಡದಿಂದ ನಿರಂತರ ಮೇಲ್ವಿಚಾರಣೆ ಮೂಲಕ ಅವರ ಆರೋಗ್ಯದ ಕಡೆಗೆ ಗಮನ ಹರಿಸುತ್ತಾರೆ. ಸಹಜ ಸ್ಥಿತಿಗೆ ಅವರ ಆರೋಗ್ಯ ತರಲು ಪ್ರಯತ್ನಿಸುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *