ಬೆಂಗಳೂರು; ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಫ್ಯಾಮಿಲಿ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸುತ್ತಲೆ ಇರುತ್ತಾರೆ. ಇದೀಗ ಯಡಿಯೂರಪ್ಪ ಕುಟುಂಬ ಮುಕ್ತ ಬಿಜೆಪಿ ಮಾಡಬೇಕೆಂದು ಪಣ ತೊಟ್ಟಿದ್ದಾರೆ. ಈ ಬಗ್ಗೆ ಮಾತನಾಡಿರುವ ಶಾಸಕ ಯತ್ನಾಳ್, ಬಿಜೆಪಿ ಬಿಟ್ಟು ಬೇರೆ ಪಕ್ಷ ಕಟ್ಟುವ ಬಗ್ಗೆ ಯೋಚನೆಯನ್ನು ಮಾಡಿಲ್ಲ ಎನ್ನುತ್ತಾರೆ.

ಬೇರೆ ಪಕ್ಷ ಕಟ್ಟುತ್ತಾರೆ ಎಂಬ ಮಾತು ಓಡಾಡುತ್ತಿದೆ. ಅದರಲ್ಲೂ ಹಿಂದೂ ಪಕ್ಷ ಕಟ್ಟುವ ಪ್ಲ್ಯಾನ್ ಮಾಡಿದ್ದಾರೆ ಎಂಬ ಮಾತು ಓಡಾಡುತ್ತಿದೆ. ಈ ಬಗ್ಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಆ ಥರದ ಯಾವ ಯೋಚನೆಯನ್ನು ನಾನು ಮಾಡಿಲ್ಲ. ನಾವೂ ಬಿಜೆಪಿ ಪಕ್ಷವನ್ನೇ ಸ್ಟ್ರಾಂಗ್ ಮಾಡ್ತೇವೆ. ನರೇಂದ್ರ ಮೋದಿ ಈ ದೇಶಕ್ಕೊಂದು ಶಕ್ತಿ. ಬಿಜೆಪಿಯನ್ನ ಹಾಳು ಮಾಡುವಂತ ಕೆಲಸ ಮಾಡಲ್ಲ. ಬಿಜೆಪಿಯನ್ನೇ ಶಕ್ತಿಶಾಲಿಯನ್ನಾಗಿ ಮಾಡುತ್ತೇವೆ. ಬಿಜೆಪಿಯನ್ನ ನಮ್ಮ ಜಾತಿ ಪರವಾಗಿ ಎತ್ತಿ ಕಟ್ಟುವುದಿಲ್ಲ.

ಒಬ್ಬ ವ್ಯಕ್ತಿಯ ಪರವಾಗಿ ಸಂಘರ್ಷ ಮಾಡುತ್ತಿಲ್ಲ. ಈ ವ್ಯಕ್ತಿಯ ಕುಟುಂಬದಿಂದ ಬಿಜೆಪಿ ಮುಕ್ತವಾಗಬೇಕು. ನಾಳೆ ಅವರ ಮೊಮ್ಮಗ, ಅವರ ಮರಿ ಮೊಮ್ಮಗ, ಮೋದಿಯವರು ಹೇಳುತ್ತಾರೆ ಪಕ್ಷದಲ್ಲಿ ಅವರಿವರು ಇರಬಾರದು ಅಂತ. ಮೋದಿಯವರು ಹೇಳಿರುವ ಮಾತನ್ನ ನಡೆಸೋದಕ್ಕೆ ಹೇಳ್ತಾ ಇದ್ದೀನಿ. ನಾವೂ ಯಾವುದೇ ಪರಿಸ್ಥಿತಿಯಲ್ಲೂ ಮತ್ತೊಂದು ಪಕ್ಷ ಕಟ್ಟೋದಾಗ್ಲಿ. ಬಿಜೆಪಿಯ ಹೈಕಮಾಂಡ್ ಅನ್ನು ಬ್ಲಾಕ್ ಮೇಲ್ ಮಾಡುವುದಾಗಲಿ ಮಾಡುವುದಿಲ್ಲ. ನಮ್ಮ ಗುರಿ ಇರುವುದು 135 ಸೀಟುಗಳನ್ನ ಪಡೆಯಬೇಕು ಅನ್ನೋದಷ್ಟೇ ಎಂದಿದ್ದಾರೆ. ಬಿಜೆಪಿಯ ಶಿಸ್ತು ಸಮಿತಿ ಸಾಕಷ್ಟು ಬಾರಿ ನೋಟೀಸ್ ಕೊಟ್ಟರು ಡೋಂಟ್ ಕೇರ್ ಎಂಬಂತ ನಡವಳಿಕೆಯನ್ನೇ ತೋರಿದ್ದಾರೆ.

