ಹಿರಿಯೂರು : ಕಾರು – ಲಾರಿ ಡಿಕ್ಕಿ : ಓರ್ವ ಸಾವು

1 Min Read

ಸುದ್ದಿಒನ್, ಹಿರಿಯೂರು, ಮಾರ್ಚ್. 13 : ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಹಿರಿಯೂರು – ಚಳ್ಳಕೆರೆ ರಾಷ್ಟ್ರೀಯ ಹೆದ್ದಾರಿ 150A ರಲ್ಲಿ ಇಂದು (ಗುರುವಾರ) ರಾತ್ರಿ ಸುಮಾರು 9 : 30 ರ ವೇಳೆಗೆ ನಡೆದಿದೆ.

ಹಿರಿಯೂರು – ಚಳ್ಖಕೆರೆ ರಸ್ತೆಯ ಆರ್.ಕೆ. ಪವರ್ ಬಳಿ ಘಟನೆ ನಡೆದಿದ್ದು, ಇಕೋ ವಾಹನ ಓವರ್ ಟೇಕ್ ಮಾಡುವಾಗ ಮುಂದೆ ಬರುತ್ತಿದ್ದ ಈಚರ್ ವಾಹನಕ್ಕೆ ಕಾರ್ ಡಿಕ್ಕಿಯಾದ ಪರಿಣಾಮವಾಗಿ ಈ ದುರ್ಘಟನೆ ಸಂಭವಿಸಿದೆ.
ಮೃತರನ್ನು ಹಿರಿಯೂರಿನ ಸಿದ್ಧನಾಯಕ ಸರ್ಕಲ್ ನಿವಾಸಿ ಸಿದ್ಧರಾಜು(35) ಎಂದು ಗುರುತಿಸಲಾಗಿದೆ. ಹಿರಿಯೂರು ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *