ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ಮಾ.13 : ನರೇಗಾ ಕಾಮಗಾರಿ ಸಮರ್ಪಕ ಅನುಷ್ಠಾನ ಮಾಡಬೇಕೆಂದು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿದ್ದಾರೆ.

ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿ ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆ ವತಿಯಿಂದ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕು ಹಾಗು ಚಳ್ಳಕೆರೆ ತಾಲೂಕುಗಳು ಅತ್ಯಂತ ಬರಪೀಡಿತ ಜಿಲ್ಲೆಗಳಾಗಿದ್ದು ಗ್ರಾಮೀಣ ಪ್ರದೇಶದಲ್ಲಿ ಇರುವಂತಹ ಜನರಿಗೆ ಗ್ರಾಮ ಪಂಚಾಯಿತಿ ವತಿಯಿಂದ ನೀಡಬೇಕಾದ ನೂರು ದಿನಗಳ ನರೇಗಾ ಕೆಲಸಗಳನ್ನು ಪಿಡಿಒ ಮತ್ತು ತಾಲೂಕು ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷದಿಂದ ದುಡಿಯುವ ಕೈಗಳನ್ನ ಕಟ್ಟಿ ಹಾಕಿದಂತಾಗಿದೆ ಅಧಿಕಾರಿಗಳ ನಿರ್ಲಕ್ಷದಿಂದ ಕೂಲಿ ಕಾರ್ಮಿಕರಿಗೆ ಕೆಲಸವನ್ನು ನೀಡದೆ ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಚಳ್ಳಕೆರೆ ತಾಲೂಕಿನ ಗ್ರಾಮ ಪಂಚಾಯಿತಿಗಳಾದ ದೊಡ್ಡೇರಿ, ಚೌಳೂರು, ಪಗಡಲ ಬಂಡೆ ದೇವರ, ಮರಕುಂಟೆ, ಜಾಜೂರು, ನನ್ನಿವಾಳ ಹಾಗೂ ಚಿತ್ರದುರ್ಗ ತಾಲೂಕಿನ ಗ್ರಾಮ ಪಂಚಾಯಿತಿಗಳಾದ ಕಲ್ಕೆರೆ ತುರುವನೂರು ಕೋಗುಂಟೆ, ಚಿಕ್ಕಗೊಂಡನಹಳ್ಳಿ ಮತ್ತು ಮೊಳಕಾಲ್ಮುರು ತಾಲೂಕಿನ ಬಿ.ಜಿಕೆರೆ ಪಂಚಾಯಿತಿ ವ್ಯಾಪ್ತಿಗಳಲ್ಲಿ ಉದ್ಯೋಗ ಖಾತ್ರಿ ಕೆಲಸಗಳು ಆಗಬೇಕಾಗಿದೆ ಇದರಿಂದ ಸ್ಥಳೀಯ ಕೂಲಿ ಕಾರ್ಮಿಕರಿಗೆ ಅನುಕೂಲವಾಗಲಿದೆ.
ಪ್ರತಿಭಟನೆಯಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರಾದ ತೇಜಸ್ವಿನಿ, ಕವಿತಾ, ರಂಜಿತಾ, ಗೀತಮ್ಮ, ಬೊಮ್ಮಕ್ಕ, ರಾಮಪ್ಪ, ಭಾರತಿ, ಆನಂದ, ಓಬಣ್ಣ, ಚೆನ್ನಮ್ಮ, ನಾಗರಾಜ್, ಈರಮ್ಮ, ಚಿತ್ರಮ್ಮ, ವಿನೋದಮ್ಮ, ಕಾಟಮ್ಮ, ಶಿವಮ್ಮ, ಬೋರಮ್ಮ, ಮಂಜಮ್ಮ, ಭಾಗ್ಯಮ್ಮ, ರಾಧಮ್ಮ ಇತರರು ಇದ್ದರು.

