ಬೆಂಗಳೂರು: ನಿನ್ನೆ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಜನರಲ್ ಬಿಪಿನ್ ರಾವತ್ ಸೇರಿದಂತೆ 13 ಮಂದಿ ನಿಧನರಾಗಿದ್ದಾರೆ. ಅದರಲ್ಲಿ ಅದೃಷ್ಟವಶಾತ್ ಎಂಬಂತೆ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಬದುಕುಳಿದಿದ್ದಾರೆ. ಅವರನ್ನ ನಿನ್ನೆಯಿಂದ ವೆಲಿಂಗ್ಟನ್ ಆಸ್ಪತ್ರೆಯಲ್ಲೇ ಚಿಕಿತ್ಸೆ ಮಾಡಲಾಗಿತ್ತು.

ವರುಣ್ ಸಿಂಗ್ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನ ಬೆಂಗಳೂರಿಗೆ ಶಿಪ್ಟ್ ಮಾಡಲಾಗಿದೆ. ವರುಣ್ ಸಿಂಗ್ ಗೆ ಶೇಕಡ 95 ರಷ್ಟು ದೇಹ ಸುಟ್ಟು ಹೋಗಿದೆ. ಐಸಿಯುನಲ್ಲಿ ಜೀವನ್ಮರಣ ಹೋರಾಟ ಮಾಡುತ್ತಿದ್ದಾರೆ. ಈ ಅಪಾಯದಿಂದ ಪಾರಾಗಿ ಅವರಾದರೂ ಬದುಕಿ ಬರಲಿ ಎಂಬುದೇ ಕೋಟ್ಯಾಂತರ ಭಾರತೀಯರ ಪ್ರಾರ್ಥನೆಯಾಗಿದೆ.

ಅವರ ಪರಿಸ್ಥಿತಿ ಗಂಭೀರವಾಗಿದ್ದರು, ಅವರ ಆರೊಇಗ್ಯ ಸ್ಥಿರವಾಗಿದೆ. ಹೀಗಾಗಿ ಅವರನ್ನ ಬದುಕುಳಿಸಿಕೊಳ್ಳುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಹೀಗಾಗಿಯೇ ಅವರನ್ನ ಬೆಂಗಳೂರಿನ ಸೇನಾಸ್ಪತ್ರೆಗೆ ಏರ್ ಲಿಫ್ಟ್ ಮೂಲಕ ಕರೆ ತಂದಿದ್ದಾರೆ.

