ಗಗನಯಾತ್ರಿ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರನ್ನ ಇನ್ನೇನು ಭೂಮಿಗೆ ಕರೆತರುತ್ತಾರೆ ಎನ್ನುವ ಸಂಭ್ರಮ ಎಲ್ಲರಿಗು ಇತ್ತು. ಆದರೆ ಈಗ ಆ ಸಂತಸಕ್ಕೆ ಮತ್ತೆ ಬ್ರೇಕ್ ಬಿದ್ದಿದೆ. ಗಗನಯಾತ್ರಿಗಳನ್ನು ಭೂಮಿಗೆ ಕರೆತರುವ ಕಾರ್ಯಾಚರಣೆ ಮತ್ತೆ ಮುಂದೂಡಿಕೆಯಾಗಿದೆ. ಈ ಮಾಹಿತಿಯನ್ನ ನಾಸಾ ಹಂಚಿಕೊಂಡಿದೆ.

ಕಳೆದ ಒಂಭತ್ತು ತಿಂಗಳ ಹಿಂದೆ ಬಾಹ್ಯಾಕಾಶ್ಯಕ್ಕೆ ಹೋದವರು ತಾಂತ್ರಿಕ ಅಡಚಣೆಯಿಂದ ಮತ್ತೆ ಭೂಮಿಗೆ ಬರುವುದಕ್ಕೆ ಆಗಿಲ್ಲ. ಬಾಹ್ಯಾಕಾಶದಲ್ಲಿಯೇ ಸಿಲುಕಿಕೊಂಡಿದ್ದಾರೆ. ಸ್ವಲ್ಪ ದಿನ ಸುನೀತಾ ವಿಲಿಯಮ್ಸ್ ಆರೋಗ್ಯವೂ ಹದಗೆಟ್ಟಿತ್ತು. ಸದ್ಯವಾರೋಗ್ಯವಾಗಿ ಏನೋ ಇದ್ದಾರೆ. ಆದರೆ ಅವರನ್ನು ಭೂಮಿಗೆ ಕರೆತರುವ ಕನಸು ಮಾತ್ರ ಮುಂದಕ್ಕೆ ಹೋಗಿದೆ.

ಮಾರ್ಚ್ 13ರಿಂದ SpaceX ಕಾರ್ಯಾಚರಣೆ ಆರಂಭವಾಗಲಿದೆ, ಈ ಮೂಲಕ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ರನ್ನು ಕರೆತರುವ ಪ್ಲ್ಯಾನ್ ಆಗಿತ್ತು. ಆದರೆ ಈಗ ಆ ಕಾರ್ಯಾಚರಣೆಯಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ಕರೆತರುವ ಪ್ಲ್ಯಾನ್ ಅನ್ನು ಮುಂದೂಡಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಮಷಿನ್ ಹೈಡ್ರಾಲಿಕ್ ವ್ಯವಸ್ಥೆಯಲ್ಲಿ ಸಮಸ್ಯೆಯಾಗಿದೆ ಎಂದು ನಾಸಾ ಉಡಾವಣಾ ನಿರೂಪಕ ತಿಳಿಸಿದ್ದಾರೆ. ಆದರೆ ರಾಕೆಟ್ ಹಾಗೂ ಬಾಹ್ಯಾಕಾಶ ನೌಕೆಯಲ್ಲಿ ಎಲ್ಲವೂ ಸರಿಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಬುಧವಾರ ಸಂಜೆ 7.30ಕ್ಕೆ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಬೇಕಿತ್ತು. ಆದರೆ ತಾಂತ್ರಿಕ ಸಮಸ್ಯೆ ಎದುರಾಗಿದೆ. ಮತ್ತೆ ಕಾರ್ಯಾಚರಣೆಯನ್ನ ಯಾವಾಗ ಶುರು ಮಾಡುತ್ತಾರೆ ಎಂಬ ಮಾಹಿತಿಯನ್ನ ನಾಸಾ ಇನ್ನು ನೀಡಿಲ್ಲ. ಎಂಟು ದಿನಕ್ಕೆ ಎಂದು ಹೋದವರು ತಿಂಗಳು ಗಟ್ಟಲೇ ಬಾಹ್ಯಾಕಾಶದಲ್ಲಿಯೇ ಸಿಕ್ಕಿಕೊಂಡು ಬಿಟ್ಟಿದ್ದಾರೆ.

