ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ, ಮಾರ್ಚ್. 12 : ವೀರಶೈವ ಧರ್ಮದ ಸಂಸ್ಥಾಪಕರಾದ ಶ್ರೀಮದ್ ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರವರ ಜಯಂತಿಯನ್ನು ಇಂದು ನಗರದ ಜೆಸಿಆರ್ ಬಡಾವಣೆಯಲ್ಲಿನ ಚಿತ್ರದುರ್ಗ ಜಂಗಮ ಸಮಾಜದ ಕಚೇರಿಯಲ್ಲಿ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ವೀರಶೈವ ಸಮಾಜದ ಮುಖಂಡರಾದ ಬಾಪೂಜಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ.ಎಂ.ವಿರೇಶ್, ಬಿಜೆಪಿ ಮುಖಂಡರಾದ ಜಿ.ಎಚ್.ಕಲ್ಲೇಶಯ್ಯ, ನಗರಸಭಾ ಸದಸ್ಯರಾದ ಬಿ. ಸುರೇಶ್, ಜಂಗಮ ಸಮಾಜದ ಮುಖಂಡರಾದ ಜಂಗಮ ಸಮಾಜದ ಅಧ್ಯಕ್ಷರಾದ ಮಲ್ಲಿಕಾರ್ಜನಯ್ಯ, ಪ್ರಧಾನ ಕಾರ್ಯದರ್ಶಿ ಷಡಾಕ್ಷರಯ್ಯ, ಶಿವನಗೌಡರು, ಶಶಿಧರ್ ಬಾಬು, ನಾಗೇಂದ್ರಯ್ಯ, ಕರಿಬಸವಯ್ಯ, ಲೀಲಾವತಿ, ಬಸವರಾಜ ಶಾಸ್ತ್ರಿ, ರುದ್ರೇಶ್ ವಿಜಯಕುಮಾರ್, ಬಸವರಾಜಯ್ಯ, ಇನ್ನೂ ಮುಂತಾದವರು ಭಾಗವಹಿಸಿದ್ದರು

